


ಡೈಲಿ ವಾರ್ತೆ: 19/ಆಗಸ್ಟ್/ 2025


ಬೈಲೂರಿನ ಉದ್ಯಮಿ ಕೃಷ್ಣರಾಜ್ ಹೆಗ್ಡೆ (45) ವಿಷ ಸೇವಿಸಿ ಆತ್ಮಹತ್ಯೆ

ಮಣಿಪಾಲ: ಬೈಲೂರಿನ ಹೊಟೇಲ್ ಉದ್ಯಮಿ ಕೃಷ್ಣರಾಜ್ ಹೆಗ್ಡೆ (45) ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಂಭವಿಸಿದೆ.
ಮಣಿಪಾಲದ ಡೌನ್‌ಟೌನ್ ಬಾರ್‌ನ ಪಾಲುದಾರರಾದ ಕೃಷ್ಣರಾಜ್ ಅವರು ತಮ್ಮದೇ ಆತ್ರಾಡಿ ನಿವಾಸದಲ್ಲಿ, ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಸಹೋದರಿ, ಪತ್ನಿ, ಮಗನನ್ನು ಅಗಲಿದ್ದಾರೆ. ಹಿರಿಯಡ್ಕ ಠಾಣೆಯ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.