


ಡೈಲಿ ವಾರ್ತೆ: 01/ಸೆ./2025


ಹಂಗಳೂರು| 10ನೇ ವರ್ಷದ ಕಲಂದರ್ ಖಾಂದಾನ್ ಮೌಲೀದ್ – 1 ಜೋಡಿ ಮದುವೆ ಕಾರ್ಯಕ್ರಮ

ಕುಂದಾಪುರ: 10ನೇ ವರ್ಷದ ಕಲಂದರ್ ಖಾಂದಾನ್ ಮೌಲೀದ್ ಕಾರ್ಯಕ್ರಮವು ಆ. 31ರಂದು ಭಾನುವಾರ ಬೆಳಿಗ್ಗೆ ಹಂಗಳೂರು ಯುನಿಟಿ ಹಾಲ್ ನಲ್ಲಿ ಅಸ್ಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಅವರ ದುವಾ ನೇತೃತ್ವದಲ್ಲಿ ನಡೆಯಿತು.

ಹಂಗಳೂರು ಜುಮ್ಮಾ ಮಸೀದಿ ಖತಿಬ್ ರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮೌಲೀದ್ ಕಾರ್ಯಕ್ರಮವನ್ನು ನೆರೆವೇರಿಸಿ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಕಲಂದರ್ ಸಿಟಿ ಶಾಮಿಯಾನ ಹಂಗಳೂರು ಅವರು ವಹಿಸಿದ್ದರು.








ಈ ಸಂದರ್ಭದಲ್ಲಿ ಅಬೂಬಕ್ಕರ್ ಸಿದ್ದೀಕ್ ಸಖಾಫಿಯವರನ್ನು ಸನ್ಮಾನಿಸಲಾಯಿತು.
ಹಾಗೂ ಒಂದು ಜೋಡಿ ಮದುವೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಂಗಳೂರು ಕಲಂದರ್ ಖಾಂದಾನಿನ ಎಲ್ಲಾ ಸದಸ್ಯರು ಹಾಗೂ ಜಮಾತ್ ಬಾಂಧವರು ಮತ್ತು ಊರ – ಪರಊರಿನವರು ಪಾಲ್ಗೊಂಡರು.