


ಡೈಲಿ ವಾರ್ತೆ: 07/ಸೆ./2025


ಕೋಟ: ಈದ್ ಮಿಲಾದ್ ರ್‍ಯಾಲಿಯಲ್ಲಿ ಸಿಹಿ ಹಂಚಿ ಸೌಹಾರ್ದತೆಗೆ ಮೆರೆದ ಹಿಂದೂ ಬಾಂಧವರು

ಕೋಟ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಕೋಡಿ ಕನ್ಯಾಣ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನಾಚರಣೆ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.

ಕೋಡಿ ಕನ್ಯಾಣ ಮುಹಿಯುದ್ದೀನ್ ಜುಮಾ ಮಸೀದಿಯಿಂದ ಹೊರಟ ಮಿಲಾದ್ ರ‍್ಯಾಲಿ ಪಾರಂಪಳ್ಳಿಗೆ ಸಾಗಿ ಬಂದು ಅಲ್ಲಿಂದ ಕೋಟತಟ್ಟು ಸೇರಿ ನಂತರ ವಾಪಸು ಕೋಡಿ ಕನ್ಯಾಣದಲ್ಲಿ ಸಂಪನ್ನಗೊಂಡಿತು.


ಮೆರವಣಿಗೆಯುದ್ದಕ್ಕೂ ಸಾರ್ವಜನಿಕವಾಗಿ ಸಿಹಿತಿಂಡಿ, ತಂಪು ಪಾನೀಯ, ಐಸ್ ಕ್ರೀಮ್ ವಿತರಿಸಲಾಯಿತು. ಅಲ್ಲದೆ ಕೋಟತಟ್ಟು ಹಿಂದೂ ಬಾಂಧವರು ರ‍್ಯಾಲಿ ಬಂದವರಿಗೆ
ಐಸ್ ಕ್ರೀಮ್ ಹಂಚಿ ಸೌಹಾರ್ದತೆ ಮೆರೆದರು.
ಈ ಸಂದರ್ಭದಲ್ಲಿ ರತ್ನಾಕರ ಶ್ರೀಯನ್ ಕೋಟತಟ್ಟು, ಮಹಾಬಲ ಮಡಿವಾಳ, ಇಲಿಯಾಸ್ ಪಾರಂಪಳ್ಳಿ ಮೊದಲದವರು ಸಹಕರಿಸಿದರು.