


ಡೈಲಿ ವಾರ್ತೆ: 11/ಸೆ./2025


ಮಲ್ಪೆ| ಮೀನುಗಾರಿಕಾ ದೋಣಿ ಮಗುಚಿ ಬಿದ್ದು ಮೀನುಗಾರ ಸಾಸ್ತಾನ ಕೋಡಿತಲೆ ನಿವಾಸಿ ರಾಮ ಖಾರ್ವಿ ಮೃತ್ಯು

ಮಲ್ಪೆ:ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ಮೃತಪಟ್ಟ ಘಟನೆ ಮಲ್ಪೆ ಲೈಟ್ ಹೌಸ್ ಬಳಿ ಬುಧವಾರದಂದು ಸಂಭವಿಸಿದೆ.
ಮೃತಪಟ್ಟ ಮೀನುಗಾರ ಸಾಸ್ತಾನ ಸಸ್ಕೋಡಿತಲೆ ನಿವಾಸಿ ರಾಮ ಖಾರ್ವಿ ಎಂದು ಗುರುತಿಸಲಾಗಿದೆ.
ರಾಮ ಖಾರ್ವಿ ಒಬ್ಬರೇ ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ರಾಮ ಖಾರ್ವಿ ನಾಪತ್ತೆ ಆಗಿದ್ದರು.
ಅವರ ಮೃತ ದೇಹ ಸೆ.11 ರಂದು ಗುರುವಾರ ಮಲ್ಪೆ ಲೈಟ್ ಹೌಸ್ ಬಳಿ ಸಿಕ್ಕಿರುತ್ತೆ.
ರಾಮ ಖಾರ್ವಿ ಅವರ ಮಾಲಕತ್ವದ ದೋಣಿಯಲ್ಲಿ ಅವರು ಸುಮಾರು 30ವರ್ಷದಿಂದ ಒಬ್ಬರೇ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳುತಿದ್ದರು.
ಎಂದಿನಂತೆ ಬುಧವಾರ ಕೂಡ ಮೀನುಗಾರಿಕೆಗೆ ತೆರೆಳಿದ್ದ ಸಂದರ್ಭ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.
ಮದ್ಯಾಹ್ನವಾದರೂ ಮನೆಗೆ ಬಾರದಿದ್ದ ಕಾರಣ ರಾಮ ಖಾರ್ವಿ ಅವರ ಮಗ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದರು. ಆದರೆ ಅವರೊಂದಿಗೆ ಸಂಪರ್ಕ ವಾಗದ ಕಾರಣ ಮಲ್ಪೆಗೆ ಸಂಬಂಧಿಕರೊಂದಿಗೆ ಸ್ನೇಹಿತರೊಂದಿಗೆ ಸೇರಿ ರಾತ್ರಿ ಹುಡುಕಾಟ ಮಾಡಿದ್ರು ಆದರೆ ಗುರುವಾರ ಮಲ್ಪೆ ಲೈಟ್ ಹೌಸ್ ಬಳಿ ರಾಮ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ.
ಹಾಗೂ ದೋಣಿ,ಇಂಜಿನ,ಬಲೆ ಇತರರ ಸಲಕರಣಿಗಳು ಪತ್ತೆಯಾಗಿದ್ದು ಅದು ಸಂಪೂರ್ಣ ಹಾನಿಯಾಗಿದ್ದು ತುಂಬಾ ನಷ್ಟವಾಗಿರುತ್ತದೆ.