ಡೈಲಿ ವಾರ್ತೆ: 17/ಸೆ./2025

FIR ಗಳಿಗೆ ಕ್ಯಾರೇ ಇಲ್ಲದ ಶಾಸಕ – ಮುಸ್ಲಿಮರ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್

ರಾಯಚೂರು: ಮದ್ದೂರಿನಲ್ಲಿ ಕಲ್ಲು ತೂರಾಟ ವಿಚಾರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್​​ಐಆರ್ ದಾಖಲಾಗಿತ್ತು.

ಮೈಸೂರು ದಸರಾ ಉದ್ಘಾಟನಾ ವಿಚಾರವಾಗಿ, ‘‘ಸನಾತನ ಧರ್ಮದವರು ಮಾತ್ರ ಚಾಮುಂಡಿಗೆ ಹೂ ಮುಡಿಸಬೇಕು, ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ’’ ಎಂದಿದ್ದ ವಿಚಾರವಾಗಿ ಕೊಪ್ಪಳದಲ್ಲಿ ಎಫ್​ಐಆರ್ ದಾಖಲಾಗಿದೆ.
ಯತ್ನಾಳ್‌ ದಲಿತ ಹೆಣ್ಣುಮಕ್ಕಳಿಗೆ ಅಪಮಾನ ಮಾಡಿದ್ದಾರೆ. ಅಟ್ರಾಸಿಟಿ ಕಾಯ್ದೆಯಡಿ ಯತ್ನಾಳ್ ಬಂಧಿಸಬೇಕೆಂದು ದಲಿತ ವಿಮೋಚನೆಯ ಮಾನವ ಹಕ್ಕುಗಳ ಕಾರ್ಯಕರ್ತ ಮಲ್ಲು ಪೂಜಾರ್ ದೂರಿನಲ್ಲಿ ಆಗ್ರಹಿಸಿದ್ದರು. ಆದರೂ ಯತ್ನಾಳ್ ಹವಾ ತಣ್ಣಗಾಗಿಲ್ಲ. ರಾಯಚೂರಿನ ಗಣೇಶೋತ್ಸವದಲ್ಲಿ ಮಾತನಾಡಿದ ಅವರು, ವರ್ಷಕ್ಕೆ ಒಂದು ಬಾರಿ ಡಿಜೆ ಹಾಕಲು ನಾವು ಅನುಮತಿ ಪಡೆಯಬೇಕಂತೆ. ಉಳಿದವರು ಯಾವಾಗ ಏನು ಬೇಕಾದರೂ ಬೊಬ್ಬೆಹೊಡೆಯಬಹುದು. ಅವರು (ಮುಸ್ಲಿಮರನ್ನು ಉದ್ದೇಶಿಸಿ) ದಿನಕ್ಕೆ 5 ಸಲ ಕೂಗಿದರೆ ನಮಗೆ ತೊಂದರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.