



ಡೈಲಿ ವಾರ್ತೆ: 28/ಸೆ./2025

ಉಡುಪಿ| ಕಕ್ಕುಂಜೆ ಅಬ್ಬಣ್ಣ ಕುದುರು ಗೋಪಾಲ್ ಸುವರ್ಣ ವಿಧಿವಶ

ಉಡುಪಿ: ಕಕ್ಕುಂಜೆ ಅಬ್ಬಣ್ಣ ಕುದುರು ಗೋಪಾಲ್ ಸುವರ್ಣ ಅವರು ಅಲ್ಪಕಾಲದ ಅನಾರೋಗ್ಯದಿಂದ
ಇಂದು (ಭಾನುವಾರ) ಬೆಳಿಗ್ಗೆ ದೈವಾಧೀನರಾಗಿರುತ್ತಾರೆ.
ಮೃತರು ಅಪಾರ ದೈವಭಕ್ತ ಮತ್ತು ಮಾದರಿ ಕೃಷಿಕರಾಗಿದ್ದರು.
ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಕಕ್ಕುಂಜೆ ಅಬ್ಬಣ್ಣ ಕುದುರುವಿನ ದೈವ ದೇವಸ್ಥಾನಗಳ ಗುರಿಕಾರರು ಮೇಲ್ಮನೆ ಹಾಗೂ ಕೆಳಮನೆ ಮೋಕ್ತೆಸರರು ಹಾಗೂ ವಿವಿಧ ಧಾರ್ಮಿಕ ಸಮಿತಿಗಳ ಸದಸ್ಯರು ಶ್ರದ್ಧಾಂಜಲಿ ಅರ್ಪಿಸಿರುತ್ತಾರೆ.