ಡೈಲಿ ವಾರ್ತೆ: 01/ಅ./2025

ಕುಂದಾಪುರ| ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ದಸರಾ ಉತ್ಸವ

ಕುಂದಾಪುರ:ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಕುಂದಾಪುರದಲ್ಲಿ ಎಕ್ಸಲೆಂಟ್ ದಸರಾ – 2025 ಕಾರ್ಯಕ್ರಮವು ಸೆ. 30 ರಂದು ಮಂಗಳವಾರ ಎಕ್ಸಲೆಂಟ್ ಕ್ಯಾಂಪಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಣಿಪಾಲದ ಆಡ್ವಾನ್ಸ್ ರಿಸರ್ಚ್ ಸೆಂಟರ್ ಓಮ್ನಿಸೋಫ್ ರಿಸರ್ಚ್ ಪ್ರೈ.ಲಿ. ಪ್ರಿನ್ಸಿಪಲ್ ಇನ್ವೆಸ್ಟಿಗೇಟ‌ರ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ದೀಕ್ಷಿತ್ ಕೆ. ಶೆಟ್ಟಿ ಉದ್ಘಾಟಿಸಿ ಅವರು ಮಾತನಾಡಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹಾಗೂ ಗುರುಹಿರಿಯರ ಜೀವನಾನುಭವಗಳನ್ನು ಕೇಳುವ ಜತೆಗೆ ಒಳ್ಳೆಯ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಶಿಕ್ಷಣ ಎನ್ನುವುದು ನಮ್ಮ ಬದುಕಿನ ಒಂದು ಅಂಗವಾಗಿ ನಮ್ಮ ಬದುಕಿನುದ್ದಕ್ಕೂ ನಿರಂತರವಾಗಿ ಕಲಿಕೆ ಬಹಳಮುಖ್ಯವಾಗಿದ್ದು, ನಮ್ಮ ಆಸಕ್ತಿಯ ಕ್ಷೇತ್ರದಡೆಗೆ ನಮ್ಮಲ್ಲಿರುವ ಕೌಶಲವನ್ನು ಹಾಗೂ ಪರಿಶ್ರಮದಿಂದ ಮುಂದೆ ಸಾಗಿದಾಗ ಮಾತ್ರ ಜೀವನ ಯಶಸ್ಸು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಹಾಗೂ ನೂತನ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್ ಶಿಕ್ಷಕ ರಾಮಚಂದ್ರ ಅವರು ರಚಿಸಿದ ಕಂಪ್ಯೂಟರ್‌ಸೈನ್ಸ್ ನ ಪ್ರಶ್ನೋತ್ತರ ಮಾಲಿಕೆಯನ್ನು ಒಳಗೊಂಡ ಪುಸ್ತಕವನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ. ಹೆಗ್ಡೆ ಎಜುಕೇಶನಲ್-ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು.

ಡಾ. ದೀಕ್ಷಿತ್ ಕೆ. ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಟ್ರಸ್ಟಿ ದೀಪಾ ಎಂ.ಹೆಗ್ಡೆ ಅವರು ಶುಭ ಹಾರೈಸಿದರು. ಪ್ರಾಂಶುಪಾಲ ನಾಗರಾಜ ಶೆಟ್ಟಿ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ. ಆಚಾರ್ಯ, ಸಿಬಿಎಸ್ ಇ ವಿಭಾಗದ ಸಂಯೋಜಕಿ ವಿಶಾಲ ಶೆಟ್ಟಿ ತೀರ್ಪುಗಾರರಾದ ಶಿಕ್ಷಕಿ ರಾಜಶ್ರೀ, ರಸಿಕ್ ಶೆಟ್ಟಿ ಚಿತ್ರಕಲಾ ಶಿಕ್ಷಕ ರಮೇಶ್, ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗಾಗಿ ದುರ್ಗಾವತಾರ ಛದ್ಮವೇಷ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಸಂಜೆ ಎಕ್ಸಲೆಂಟ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈಭವಗಳು ಪ್ರದರ್ಶನಗೊಂಡಿತು. ಹಿಂದಿ ಶಿಕ್ಷಕಿ ಉಷಾಲತಾ ಸ್ವಾಗತಿಸಿ, ಶಿಕ್ಷಕ ಸಂದೀಪ್ ನಿರೂಪಿಸಿ, ಭೌತಶಾಸ್ತ್ರ ವಿಭಾಗದ ಶಿಕ್ಷಕಿ ಶಿಲ್ಪರಾಣಿ ವಂದಿಸಿದರು.