



ಡೈಲಿ ವಾರ್ತೆ: 03/ಅ./2025

ಮಂಗಳೂರು ವಿವಿ ವಾಣಿಜ್ಯ ವಿಭಾಗದಲ್ಲಿ ವಿಶೇಷ ಉಪನ್ಯಾಸ

ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಬದುಕು ಮತ್ತು ಆರ್ಥಿಕ ನಿರ್ವಹಣೆ ಕಲೆಯ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಪ್ರಾಧ್ಯಾಪಕರು ಹಾಗೂ ಆರ್ಥಿಕ ತಜ್ಞರಾದ ಡಾ. ಕೆ. ಯು. ಮಾದ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಾ ಸಮಯದ ಪರಿಣಾಮಕಾರಿಯಾದ ಬಳಕೆಯು ಭವಿಷ್ಯತ್ತಿಗೆ ಹೂಡಿಕೆಯಾಗಿದೆ. ಇದರಿಂದ ಬದುಕನ್ನು ನಾವು ಯೋಜಿತವಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು. ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸುವುದರಿಂದ ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ಶೈಕ್ಷಣಿಕ ಬೆಳವಣಿಗೆಯೊಂದಿಗೆ ವ್ಯಕ್ತಿಯ ಮೌಲ್ಯವು ಹೆಚ್ಚುತ್ತದೆ. ಹಣಕಾಸನ್ನು ಶಿಸ್ತು ಬದ್ಧವಾಗಿ ಉಪಯೋಗಿಸುವುದನ್ನು ನಾವೆಲ್ಲರೂ ಪಾಲಿಸಬೇಕು. ಇದರಿಂದ ಆರ್ಥಿಕ ನಿರ್ವಹಣೆಯ ಮಹತ್ವವನ್ನು ಹೆಚ್ಚುತ್ತದೆ ಎಂದು ನುಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಈಶ್ವರ ಪಿ. ಮತ್ತು ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಜೀದಾ ಬಾನು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸಿ. ಲಹರಿ ಮತ್ತು ವೈಶಾಲಿ ಕೆ. ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿನಿ ಆಫ್ನ ವಂದಿಸಿದರು.