ಡೈಲಿ ವಾರ್ತೆ: 07/ಅ./2025

ಕುಂದಾಪುರ| ಶ್ರೀಮತಿ ಸುಂದರಿ ಶಂಕರ್ ಖಾರ್ವಿ ನಿಧನ

ಕುಂದಾಪುರ: ಸ್ಥಳೀಯ ಖಾರ್ವಿ ಮೇಲ್ಕೆರಿ ನಿವಾಸಿ ಚಿಪ್ಪು ಉದ್ಯಮಿ ದಿ. ಶಂಕರ್ ಖಾರ್ವಿ (ಮೇಸ್ತ್ರಿ ) ಅವರ ಧರ್ಮಪತ್ನಿ ಶ್ರೀಮತಿ ಸುಂದರಿ ಖಾರ್ವಿ (68)ಅವರು ಹೃದಯಾಘಾತದಿಂದ ದಿನಾಂಕ 06.10.25ರ ಸೋಮವಾರ ಸ್ವಗ್ರಹದಲ್ಲಿ ನಿಧನರಾದರು.

ಕೊಡುಗೈ ದಾನಿಯಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿದ ಇವರು ಸುಂದರಿಯಕ್ಕ ಎಂದೇ ಜನಜನಿತರಾಗಿದ್ದರು.
ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.