



ಡೈಲಿ ವಾರ್ತೆ: 19/ಅ./2025

ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಕೋಟ: ಜೀವನ್ ಮಿತ್ರ ಸೇವಾ ಟ್ರಸ್ಟ್, ಜೀವನ್ ಮಿತ್ರ ಆ್ಯಂಬುಲೆನ್ಸ್ ಕೋಟ ಆಶ್ರಯದಲ್ಲಿ, ಕೆ.ಎಂ.ಸಿ., ರಕ್ತನಿಧಿ ಘಟಕ, ಲಯನ್ಸ್ ಕ್ಲಬ್ ಹಂಗಳೂರು ಕುಂದಾಪುರ ಸಹಯೋಗದಲ್ಲಿ ಜೀವನ್ ಮಿತ್ರ ಸೇವಾ ಟ್ರಸ್ಟ್ ಪ್ರವರ್ತಕ ನಾಗರಾಜ್ ಪುತ್ರನ್ ಅವರ ಅ. 22ರಂದು ನಡೆಯುವ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವು ಭಾನುವಾರ ಕೋಟ ಮಾಂಗಲ್ಯ ಮಂದಿರದಲ್ಲಿ ಜರಗಿತು.

ಲಯನ್ಸ್ ಕ್ಲಬ್ ಹಂಗಳೂರು ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಗೋಪಾಲ್ ಬಂಗೇರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜೀವನ್ ಮಿತ್ರ ಸೇವಾ ಟ್ರಸ್ಟ್ ಈ ಭಾಗದಲ್ಲಿ ಉತ್ತಮ ಸಮಾಜಸೇವೆಯ ಮೂಲಕ ಗಮನಸೆಳೆದಿದೆ. ಟ್ರಸ್ಟ್ ನ ಪ್ರವರ್ತಕರಾದ ನಾಗರಾಜ್ ಪುತ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಹಾಗೂ ಮಾದರಿ ಕಾರ್ಯಕ್ರಮ ಎಂದರು.





ಈ ಸಂದರ್ಭದಲ್ಲಿ ಲಯನ್ಸ್ ಕಾರ್ಯದರ್ಶಿ ವಿಲ್ಫರ್ಡ್ ಮೆನೇಜಸ್, ಕೆ.ಎಂ.ಸಿ. ರಕ್ತನಿಧಿ ಘಟಕದ ವಿಶ್ವೇಶ್, ಜೀವನ್ ಮಿತ್ರ ಟ್ರಸ್ಟ್ ನ ನಾಗರಾಜ ಪುತ್ರನ್, ನಾಗೇಂದ್ರ ಪುತ್ರನ್ ಹಾಗೂ ಕೆ.ಎಂ.ಸಿ. ರಕ್ತನಿಧಿ ಘಟಕದ ಸಿಬಂದಿಗಳು, ಜೀವನ್ ಮಿತ್ರ ಟ್ರಸ್ಟ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.