
ಡೈಲಿ ವಾರ್ತೆ: 25/ಅ./2025
ಸಾಲಿಗ್ರಾಮ ಪ. ಪಂ. ಸುವರ್ಣ ಸಂಭ್ರಮ

ಕೋಟ: ಯಾವುದೇ ಸ್ಥಳೀಯಾಡಳಿತ ಯಶಸ್ವಿಯಾಗಬೇಕಾದರೆ, ಸರ್ಕಾರದ ಅನುದಾನ ಮುಖ್ಯವಾಗುತ್ತದೆ. ತನ್ನ ಪಾಲಿನ ಅನುದಾನ ಮತ್ತು ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಿ ಅತ್ಯುತ್ತಮ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಿದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಭಿನಂದನಾರ್ಹವಾಗಿದೆ. ಇದರ ಸುವರ್ಣ ಮಹೋತ್ಸವವು ಇನ್ನಷ್ಟು ಅಭಿವೃದ್ಧಿಯ ಪಥಕ್ಕೆ ಮುನ್ನುಡಿ ಬರೆಯಲಿ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾರೈಸಿದರು

ಶನಿವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮಂದಿರದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಭಾಕಾರ್ಯಕ್ರಮದಲ್ಲಿ ‘ಪಟ್ಟಣಪಂಚಾಯತ್ ಸುವರ್ಣ ಪಥ’ ಸಂಚಿಕೆಯ ಮುಖಪುಟ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಸ್ತುತ ಎಲ್ಲ ಜನಪ್ರತಿನಿಧಿಗಳು, ಸಂಸ್ಥೆಗಳೂ ಸರ್ಕಾರದ ಅನುದಾನದ ಕೊರತೆಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲೂ ಸುವರ್ಣ ಮಹೋತ್ಸವದ ಅಂಗವಾಗಿ ಪಟ್ಟಣ ಪಂಚಾಯತ್ ದೂರ ದೃಷ್ಟಿಯಿಂದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಹೊಸ ಸಾಧನೆಗೈದಿದೆ. ಇದು ಪ್ರಶಂಸನೀಯ ಕಾರ್ಯ ಎಂದು ಸುವರ್ಣ ಮಹೋತ್ಸವಕ್ಕೆ ಶುಭಹಾರೈಸಿದರು.

ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಿ, ಆಗಿನ ಕಾಲಘಟ್ಟದಲ್ಲಿ ಪಟ್ಟಣಪಂಚಾಯತ್ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ದ ಸಂದರ್ಭವನ್ನು ಸ್ಮರಿಸಿದರು. ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ, ಕಸವನ್ನು ಎಲ್ಲೆಂದರಲ್ಲಿ ಎಸೆಯದಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಹಿರಿಯ ಸಾಧಕರಾದ ಕೆ.ತಾರಾನಾಥ ಹೊಳ್ಳ,ನಾರಾಯಣ ಆಚಾರ್,ಪಿ. ನರಸಿಂಹ ಐತಾಳ್, ಗುಂಡ್ಮಿ ರಾಮಚಂದ್ರ ಐತಾಳ್, ಪದ್ಮನಾಭ ಶೆಟ್ಟಿಗಾರ್, ಡಾ.ಹರೀಷ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ. ಶೆಟ್ಟಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ,
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ, ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ. ಕುಂದರ್, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳ್ಳಹಳ್ಳಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಸಾಹಿತಿ ಎ.ಎಸ್. ಎನ್. ಹೆಬ್ಬಾರ್, ಪಟ್ಟಣ ಪಂಚಾಯತ್ ಪ್ರತಿಪಕ್ಷ ನಾಯಕ ಶ್ರೀನಿವಾಸ್ ಅಮೀನ್,ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸದಸ್ಯರಾದ ರವೀಂದ್ರ ಕಾಮತ್,ಶ್ಯಾಮಸುಂದರ್ ನಾಯರಿ, ಸುಲತಾ ಎಸ್. ಹೆಗ್ಡೆ, ರೇಖಾ.ಕೆ. ಕರ್ಕೇರ,ಪುನಿತ್ ಪೂಜಾರಿ,ಗಣೇಶ್ ಕಾರ್ಕಡ,ಭಾಸ್ಕರ್ ಬಂಗೇರ,ಅನುಸೂಯ ಹೇರ್ಳೆ,ಸಂಜೀವ ದೇವಾಡಿಗ ಉಪಸ್ಥಿತರಿದ್ದರು.
ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ ಸ್ವಾಗತಿಸಿದರು. ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ. ನಿರೂಪಿಸಿದರು.

ಮೆರವಣಿಗೆ, ಎಂಆರ್‌ಎಫ್ ಘಟಕ ಲೋಕಾರ್ಪಣೆ:
ಸುವರ್ಣ ಮಹೋತ್ಸವದ ಅಂಗವಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ – ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಷ್ಟ್ರೀಯ ಹೆದ್ದಾರಿಯ ಮೂಲಕ ಪಟ್ಟಣಪಂಚಾಯತ್ ವರೆಗೆ ಮೆರವಣಿಗೆಯಲ್ಲಿ ಗಣ್ಯರನ್ನು ಕರೆತರಲಾಯಿತು.
ನಂತರ ಪಾರಂಪಳ್ಳಿ ವಿಷ್ಣಮೂರ್ತಿ ವಾಡ್೯ನಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಘನ ತ್ಯಾಜ್ಯ ಘಟಕ, ಎಂಆರ್ ಎಫ್ ಘಟಕವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು.

ಪಟ್ಟಣಪಂಚಾಯತ್ ಮುಂಭಾದಲ್ಲಿ ನಿರ್ಮಾಣಗೊಂಡ ಸಾಹಿತಿ ಡಾ.ಕೋಟ ಶಿವರಾಮ ಕಾರಂತ, ಗಾನಕೋಗಿಲೆ ಭಾಗವತ ದಿ.ಕಾಳಿಂಗ ನಾವಡ, ಪಟ್ಟಣಪಂಚಾಯತ್ ಸ್ಥಳ ದಾನಿ ಪಿ.ಜನಾರ್ದನ ಮಧ್ಯಸ್ಥ ಇವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಲಾಯಿತು.