ಡೈಲಿ ವಾರ್ತೆ: 31/ಅ./2025

ಎಕ್ಸಲೆಂಟ್ ಕುಂದಾಪುರ: ಅಂತರ್ ಕಾಲೇಜು ಮಟ್ಟದ ಪೆಸ್ಟ್ನಲ್ಲಿ ಸಮಗ್ರ ಪ್ರಥಮ ಚಾಂಪಿಯನ್‌ಶಿಫ್

“ಉಗಮ-2025” ಡಾ. ಬಿ. ಬಿ ಹೆಗ್ಡೆ ಕಾಲೇಜು, ಕುಂದಾಪುರ ಇವರ ಆಶ್ರಯದಲ್ಲಿ ನಡೆದ ‘ಅಂತರ್ ಕಾಲೇಜು ಪೆಸ್ಟ್-2025’ ಉಡುಪಿ ಜಿಲ್ಲಾ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ 16 ಕಾಲೇಜುಗಳಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ತಂಡವು ಉಡುಪಿ ಜಿಲ್ಲೆಗೆ ಪ್ರಥಮ ಚಾಂಪಿಯನ್‌ಶಿಫ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಥಮ 03, ದ್ವಿತೀಯ 02, ಹಾಗೂ ತೃತೀಯ 01 ಪ್ರಶಸ್ತಿಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಚಾಂಪಿಯನ್‌ಶಿಫ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸಾಧನೆಯನ್ನು ಮಾಡಿದ ನಮ್ಮ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರು ಎಂ. ಮಹೇಶ್ ಹೆಗ್ಡೆ, ಪ್ರಾಂಶುಪಾಲರು ನಾಗರಾಜ್ ಶೆಟ್ಟಿ ಹಾಗೂ ಬೋಧಕ- ಬೋಧಕೇತರ ವರ್ಗದವರು ಶುಭಹಾರೈಸಿದ್ದಾರೆ.