ಡೈಲಿ ವಾರ್ತೆ: ಫೆ./25/2026

ಅವ್ಯವಸ್ಥೆಯ ಅಗರವಾದ ಮಂಗಳೂರು ಮೀನುಗಾರಿಕಾ ದಕ್ಕೆ, ಮೀನುಗಾರಿಕಾ ಜಂಟಿ ನಿರ್ದೇಶಕರನ್ನು ಭೇಟಿಯಾದ ಎಸ್.ಡಿ.ಟಿ.ಯು ಜಿಲ್ಲಾ ನಿಯೋಗ

ಮಂಗಳೂರು : ಫೆ25 ; ಮಂಗಳೂರಿನ ದಕ್ಕೆಯಲ್ಲಿ ಕಂಬ ಬಿದ್ದ ದುರ್ಘಟನೆಯಲ್ಲಿ ಮೀನು ಕಾರ್ಮಿಕನಾದ ತಮಿಳುನಾಡು ಮೂಲದ ಮುರುಗನ್ ಇತ್ತೀಚಿಗೆ ಮೃತಪಟ್ಟಿದ್ದರು ಇದಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ರವರ ನೇತೃತ್ವದಲ್ಲಿ ಜಿಲ್ಲಾ ನಿಯೋಗ ದಕ್ಕೆಗೆ ಭೇಟಿ ನೀಡಿ ಕಾರ್ಮಿಕರ ಅಹವಾಲನ್ನು ಸ್ವೀಕರಿಸಿ ಇದರ ಭಾಗವಾಗಿ ಮೀನುಗಾರಿಕಾ ಜಂಟಿ ನಿರ್ದೇಶಕರಾದ ಸಿದ್ಯಯ್ಯ ಡಿ ರವರ ಜೊತೆ ಮೀನುಗಾರಿಕಾ ಕಾರ್ಮಿಕರ ಸುರಕ್ಷತೆಯ ಬಗ್ಗೆ ಚರ್ಚೆ ನಡೆಸಿತು

ನಿಯೋಗವು ಮಂಗಳೂರಿನ ದಕ್ಕೆಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಜಿಲ್ಲಾ ನಿಯೋಗವು ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದಾಗ ತುಕ್ಕು ಹಿಡಿದ ಕಂಬಗಳು ತಲೆಎತ್ತಿ ನಿಂತಿರುವುದು ಕಂಡುಬಂದಿದ್ದು ಈ ಸಂದರ್ಭದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಅಂತಹ ಕಂಬಗಳನ್ನು ತೆರವುಗೊಳಿಸಬೇಕು ಹಾಗೂ ಕೂಲಿ ಕಾರ್ಮಿಕರ ಜೀವರಕ್ಷಣೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮೀನುಗಾರಿಕೆ ಅಧಿಕಾರಿ ರೇವತಿ ಜೆ.ಎ ರವರು ಕಾರ್ಮಿಕರ ಜೀವ ರಕ್ಷಣೆಗಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಮಿಕರ ಸಂರಕ್ಷಣೆಗಾಗಿ ಯೂನಿಯನ್ ಅಧಿಕಾರಿಗಳೊಂದಿಗೆ ಇಟ್ಟ ಬೇಡಿಕೆಗಳು

  • ಅಪಘಡ ಸಂಭವಿಸಿದಾಗ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ
  • ಜೀವರಕ್ಷಣೆಯ ಭಾಗವಾಗಿ ಆ್ಯಂಬುಲೆಂನ್ಸ್ ವ್ಯವಸ್ಥೆಗೊಳಿಸುವುದು
  • ಪ್ರತಿ ತಿಂಗಳು ಸ್ಥಳ ಪರಿಶೀಲನೆ ನಡೆಸುವುದು
  • ಅಪಾಯ ಸ್ಥಳಗಳಿಗೆ ಸೂಚನ ಫಲಕ ಅಳವಡಿಸುವುದು
  • ಅಪಾಯದಂಚಿನಲ್ಲಿದ್ದ ಹಳೆಯ ಕಡ್ಡಡಗಳ ನವೀಕರಣ ಗೊಳಿಸುವುದು
  • ಕಾರ್ಮಿಕರಿಗೆ ವಿಮೆ ಸವಲತ್ತು ಒದಗಿಸುವುದು ಇತ್ಯಾದಿ

ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗ್ರೆ, ಜೊತೆ ಕಾರ್ಯದರ್ಶಿ ರಹಿಮಾನ್ ಮುನ್ನೂರು, ಮಂಗಳೂರು ನಗರ ತಾಲೂಕು ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬಿಪಿ, ಕೋಶಾಧಿಕಾರಿ ಶರೀಫ್ ಕುತ್ತಾರ್, ಸದಸ್ಯರಾದ ಅಮೀನ್ ಬಂದರ್ ನಿಯೋಗದಲ್ಲಿದ್ದರು