ಡೈಲಿ ವಾರ್ತೆ: 03/NOV/2025

ಟ್ಯೂಷನ್‌ ಮುಗಿಸಿ ಮರಳುತ್ತಿದ್ದ 14ರ ಬಾಲಕಿ ಮೇಲೆ ಗ್ಯಾಂಗ್‌ ರೇಪ್‌: ಮೂವರು ಕಾಮುಕರು ಬಂಧನ

ಕೋಲ್ಕತ್ತಾ: ಟ್ಯೂಷನ್‌ ಮುಗಿಸಿ ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೋಲ್ಕತ್ತಾದ ಡಮ್‌ ಡಮ್‌ ಪ್ರದೇಶದಲ್ಲಿ ನಡೆದಿದೆ.
ಕೃತ್ಯ ಎಸಗಿದ ಮೂವರು ಕಾಮುಕರನ್ನ ಪೊಲೀಸರು ಬಂಧಿಸಿದ್ದಾರೆ.

7ನೇ ತರಗತಿ ವಿದ್ಯಾರ್ಥಿನಿ ಶನಿವಾರ ಟ್ಯೂಷನ್‌ ಕ್ಲಾಸ್‌ ಮುಗಿಸಿ ಮನೆಗೆ ಮರಳುವಾಗ ಘಟನೆ ಘೋರ ದುರಂತ ನಡೆದಿದೆ. ಬಳಿಕ ಬಾಲಕಿ ನೀಡಿದ ದೂರಿನ ಮೇರೆಗೆ ಮೂವರನ್ನ ಬಂಧಿಸಿದ್ದು, ತನಿಖೆ ನಡೆಸಲಾಗುತ್ತಿದೆ.

ಪೊಲೀಸರ ಪ್ರಕಾರ, ಆರೋಪಿಗಳಲ್ಲಿ ಒಬ್ಬ ಆಕೆಯ ಪರಿಚಯಸ್ಥನೇ ಆಗಿದ್ದು, ಮೊದಲು ಪಾರ್ಕ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಮತ್ತಿಬ್ಬರು ಸೇರಿಕೊಂಡಿದ್ದಾರೆ. ಅಲ್ಲಿಂದ ಆಟೋದಲ್ಲಿ ಸ್ವಲ್ಪದೂರ ಕರೆದೊಯ್ದು ಪಾಳು ಬಿದ್ದ ಗುಡಿಸಲಿನಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಈ ವಿಷಯ ಹೊರಗೆ ಹೇಳಿದ್ರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ದೂರು ನೀಡಿರುವುದಾಗಿ ಹೇಳಿದ್ದಾರೆ.

ಬಂಧಿತರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.