
ಡೈಲಿ ವಾರ್ತೆ: 06/NOV/2025
ನ. 7 ರಂದು ಹೈನುಗಾರಿಕೆ ವೃತ್ತಿಗೆ ಕೋಟ ವ್ಯವಸಾಯಿಕ ಸಂಘದಿಂದ ಕ್ಷೀರ ಸಂಜೀವಿನಿ ಯೋಜನೆಗೆ ಚಾಲನೆ:
ಗ್ರಾಮಕ್ಕೊಂದು ಈರೋಡ್ ಹಸು ಸಾಕಾಣಿಕೆಗೆ ವಿಶೇಷ ಹಣಕಾಸು ಯೋಜನೆ

ಕೋಟ: ಕೋಟ ಸಹಕಾರಿ ವ್ಯವಸಾಯಿಕ ಬ್ಯಾಂಕ್ ( ನಿ.) ಸಂಘದ ನೂತನ ಯೋಜನೆಯ ಕ್ಷೀರ ಸಂಜೀವಿನಿ ಯೋಜನೆ ಅಡಿಯಲ್ಲಿ ಈ ವರ್ಷ ನಮ್ಮ ಸಂಘದ ಆಡಳಿತ ಮಂಡಳಿಯವರು ಈ ಯೋಜನೆಯ ಹೊಸ ರೂಪರೇಷಗಳನ್ನು ತಯಾರು ಮಾಡಿ ಈ ನಮ್ಮ ಸಂಘದ ಕಾರ್ಯ ವ್ಯಾಪ್ತಿಯ ಎಲ್ಲಾ ಹೈನುಗಾರರಿಗೆ ಬೆಂಬಲವಾಗಿ ಗ್ರಾಮಕ್ಕೆ ಒಂದು ದನದಂತೆ ಉತ್ತಮ ತಳಿಯ ಈರೋಡ್ ಹಸು ಕೊಂಡು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನಮ್ಮ ರೈತರನ್ನು ತಮಿಳುನಾಡಿನ ಈರೋಡ್ ದನಗಳ ಸಂತೆಗೆ ಕರೆದುಕೊಂಡು ಹೋಗಿ, ಅವರಿಂದಲೇ ಒಳ್ಳೆಯ ದನವನ್ನು ಆಯ್ಕೆ ಮಾಡಿ ನಾವು ಅದನ್ನು ನಮ್ಮ ಸಂಘಕ್ಕೆ ತಂದು ನಾವು ಅವರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಈ ಕಾರ್ಯಕ್ರಮಕ್ಕೆ ನಮ್ಮ ಸಂಘದಿಂದ ಒಂದು ದನಕ್ಕೆ ರೂಪಾಯಿ ನಲವತ್ತು ಸಾವಿರ ಗರಿಷ್ಠ 60% ನ್ನು ನೀಡುತ್ತಿದ್ದೇವೆ. ಅಲ್ಲದೆ ಈರೋಡ್ ದನವನ್ನು ಖರೀದಿ ಮಾಡಿ ಅದರ ಸಾಗಾಟದ ವೆಚ್ಚವನ್ನು ಮತ್ತು ಅದಕ್ಕೆ ವಿಮೆಯನ್ನು ಮಾಡಿಸಿ ರೈತರಿಗೆ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ನಮ್ಮೊಂದಿಗೆ ಕೆಎಂಎಫ್ ಮಂಗಳೂರು ಅವರು ಸಹಾಯವನ್ನು ನೀಡಿರುತ್ತಾರೆ.
ಹಾಗೆ ನಮ್ಮ 11 ಗ್ರಾಮದ ರೈತರು ಉತ್ತಮ ತಳಿಯ ದನಗಳನ್ನು ಸಾಕುವುದರೊಂದಿಗೆ ಹಾಲು ಉತ್ಪಾದನೆಯನ್ನು ಹೆಚ್ಚಿಸಬೇಕೆಂಬುದೇ ನಮ್ಮ ಸಂಘದ ಮುಖ್ಯ ಉದ್ದೇಶವಾಗಿದ್ದು ಈ ಕಾರ್ಯಕ್ರಮವನ್ನು ಇದೇ ನವೆಂಬರ್ 7 ರಂದು ಶುಕ್ರವಾರ ನಮ್ಮ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.