



ಡೈಲಿ ವಾರ್ತೆ: 10/NOV/2025

ಮಣಿಪಾಲ: ಬಾರ್ ಬಳಿ ಹೊಡೆದಾಟ: ವಿಡಿಯೋ
ವೈರಲ್ ಬೆನ್ನಲ್ಲೇ ನಾಲ್ವರ ಬಂಧನ

ಉಡುಪಿ: ಮಣಿಪಾಲದ ಈಶ್ವರ ನಗರದಲ್ಲಿರುವ ಬಾರ್ ರೆಸ್ಟೋರೆಂಟೊಂದರ ಬಳಿ ನ.08ರಂದು ರಾತ್ರಿ ರಸ್ತೆಯ ಬಳಿಯಲ್ಲಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಮರ್ ಶೆಟ್ಟಿ, ಚಂದನ್ ಸಿ ಸಾಲ್ಯಾನ್, ಧನುಷ್, ಅಜಯ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರುಗಳು ನ.8ರಂದು ಬಾರ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗ ಚೆಂದನ್ ಎಂಬಾತನ ಕೈ ಅಮರ್ ಮೈಗೆ ತಾಗಿದ ವಿಚಾರದಲ್ಲಿ ಗಲಾಟೆ ನಡೆದಿದ್ದೆ. ಒಬ್ಬರಿಗೊಬ್ಬರು “ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡು ಬೈದಾಡಿಕೊಂಡಿದ್ದು ಇದರ ವಿಡಿಯೋ ವೈರಲ್ ಆಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು ನಾಲ್ವರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.