



ಡೈಲಿ ವಾರ್ತೆ: 14/NOV/2025

ಕೋಟ| ನಗದು ಮತ್ತು ಲ್ಯಾಪ್ ಟಾಪ್ ನೊಂದಿಗೆ ಸ್ಕೂಟರ್ ಕಳವು – ದೂರು ದಾಖಲು

ಕೋಟ: ಕೋಟ ವಾಹಿದ್ ಆಲಿ ಎಂಬವರು ಸೆ. 14 ರಂದು ಶುಕ್ರವಾರ ಮಧ್ಯಾಹ್ನ ಕೋಟ ಜಾಮಿಯಾ ಮಸ್ಜಿದ್ ಆವರಣದ ಒಳಗೆ ನಿಲ್ಲಿಸಿದ್ದ ಜಿಎ 03 ಎಲ್ 6301 ನಂಬರಿನ ಹೋಂಡಾ ಡಿಓ ಸ್ಕೂಟರ್ ಕಳವು ಆಗಿರುವ ಬಗ್ಗೆ
ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಸ್ಕೂಟರ್ ನಲ್ಲಿ 19 ಸಾವಿರ ರೂಪಾಯಿ ನಗದು, ಲ್ಯಾಪ್ ಟಾಪ್ ಹಾಗೂ ಹಲವು ಮುಖ್ಯ ಡಾಕ್ಯುಮೆಂಟ್ಸ್ ಇರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕಳ್ಳನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.