
ಡೈಲಿ ವಾರ್ತೆ: 16/NOV/2025
ಕೋಟ| ಟೀಮ್ ಭವಾಬ್ಧಿ ಪಡುಕರೆ ವತಿಯಿಂದ ಗೋ ಸಂರಕ್ಷಣಾ ಕೇಂದ್ರ ಹೂವಿನಕೆರೆ ಕೋಟೇಶ್ವರಕ್ಕೆ 375 ಕೆ.ಜಿ ಹಿಂಡಿ(ಮೇವು) ಹಸ್ತಾಂತರ

ಕೋಟ: ಟೀಮ್ ಭವಾಬ್ಧಿ ಪಡುಕರೆ ಇವರ ವತಿಯಿಂದ ಉಡುಪಿ ಸೋದೆ ವಾದಿರಾಜ ಮಠದ ಶ್ರೀ ಕಾಮಧೇನು ಗೋ ಸಂರಕ್ಷಣಾ ಕೇಂದ್ರ ಹೂವಿನಕೆರೆ ಕೋಟೇಶ್ವರಕ್ಕೆ “ಗೋವಿನೆಡೆಗೆ ನಮ್ಮ ಕೊಡುಗೆ” ಯಾಗಿ ಸುಮಾರು 375 ಕೆ.ಜಿ ಹಿಂಡಿ(ಮೇವು) ನೀಡಲಾಯಿತು.
ಈ ಸಂದರ್ಭದಲ್ಲಿ ಟೀಮ್ ಭವಾಬ್ಧಿ ಅಧ್ಯಕ್ಷರಾದ ಸಂತೋಷ್ ತಿಂಗಳಾಯ ,ಪ್ರಧಾನ ಕಾರ್ಯದರ್ಶಿ ಭರತ್ ಪೂಜಾರಿ,ಕೋಶಾಧಿಕಾರಿ ಶಿವಾನಂದ ಕುಂದರ್, ಗೋ ಸಂರಕ್ಷಣಾ ಕೇಂದ್ರದ ಮೇಲ್ವಿಚಾರಕರಾದ ಟಿ.ಎಸ್ ನಾಗೇಶ್, ಭವಾಬ್ಧಿ ಸದಸ್ಯರಾದ ದರ್ಶನ್ ಪೂಜಾರಿ, ಆಕಾಶ್ ಟಿ, ಶ್ರೀನಿವಾಸ್,ಸುಮನ್ ಕಾಂಚನ್,ಶ್ರೀನಿಧಿ ವಡ್ಡರ್ಸೆ, ರವೀಂದ್ರ ತಿಂಗಳಾಯ ಹಾಗು ಇತರರು ಭಾಗಿಯಾಗಿದ್ದರು.