ಡೈಲಿ ವಾರ್ತೆ: 18/NOV/2025

ಸಾಲಿಗ್ರಾಮ ರಥಬೀದಿಯಲ್ಲಿ ಹರಿಯುತ್ತಿರುವ ಶೌಚಾಲಯದ ನೀರು – ಕಣ್ಮುಚ್ಚಿ ಕುಳಿತು ಆಡಳಿತ ವ್ಯವಸ್ಥೆ

ಕೋಟ: ಸಾಲಿಗ್ರಾಮ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ರಥಬೀದಿಗೆ ಹೊಂದಿಕೊಂಡಿರುವ ಕಟ್ಟಡದ ಶೌಚಾಲಯದ ನೀರು ರಥಬೀದಿಗೆ ಹರಿಯುತ್ತಿದೆ.

ದೇವಸ್ಥಾನದ ಆರ್ಚಕರು, ಸಾರ್ವಜನಿಕರು, ಶಾಲಾ ಮಕ್ಕಳಿಗೆ ದಿನ ನಿತ್ಯ ಈ ನೀರನ್ನು ಹಾದು ಕೊಂಡೇ ಹೋಗಬೇಕಾದ ಅನಿವಾರ್ಯತೆಯಾಗಿದೆ.
ಆ ಕಟ್ಟಡದಲ್ಲಿ ಬಾಡಿಗೆ ಮನೆ, ಮತ್ತು UKG & LKG ತರಗತಿ ನಡೆಯುತ್ತಿದ್ದು, ಅದೆಲ್ಲದರ ತ್ಯಾಜ್ಯದ ನೀರು ಸಣ್ಣ ಗುಂಡಿ ಸೇರಿ ಅದರಿಂದ ಮೇಲೆ ಬಂದು ರಥಬೀದಿಯಲ್ಲಿ ಹರಿಯುತ್ತಿದೆ. ಆದಷ್ಟು ಬೇಗ ಪಟ್ಟಣ ಪಂಚಾಯತ್ ಮತ್ತು ಅರೋಗ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.