
ಡೈಲಿ ವಾರ್ತೆ: 24/NOV/2025
ಬಾಲಿವುಡ್‌ನ ಸ್ಟಾರ್ ನಟ ಧರ್ಮೇಂದ್ರ ವಿಧಿವಶ

ಮುಂಬೈ: ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ, ಎವರ್‌ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ ಅಂತ್ಯದಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ಚಿಕಿತ್ಸೆ ಪಡೆದು ಕೇವಲ 12 ದಿನಗಳ ಹಿಂದಷ್ಟೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು.
ಧರ್ಮೇಂದ್ರ ಅವರು ಶೋಲೆ (1975) ಮತ್ತು ಚುಪ್ಕೆ ಚುಪ್ಕೆ (1975) ಸೇರಿದಂತೆ ಅನೇಕ ಸೂಪರ್-ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಫೂಲ್ ಔರ್ ಪತ್ತರ್ (1966), ಸೀತಾ ಔರ್ ಗೀತಾ (1972), ಧರಮ್ ವೀರ್ (1977), ಮತ್ತು ಮೇರಾ ಗಾಂವ್ ಮೇರಾ ದೇಶ್ (1971). ಅವರು ಪ್ರತಿಗ್ಯಾ (1975), ಆಂಖೇನ್ (1968), ಮತ್ತು ಬಾಂದಿನಿ (1963) ನಂತಹ ಸಿನಿಮಾಗಳಿಂದಲೂ ಅವರು ಹೆಸರುವಾಸಿಯಾಗಿದ್ದರು.
ಧರ್ಮೇಂದ್ರ ಅವರ ನಿಧನಕ್ಕೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.