ಡೈಲಿ ವಾರ್ತೆ: 25/NOV/2025

ತೆಕ್ಕಟ್ಟೆ| ಮರದ ಬುಡಕ್ಕೆ ಬೆಂಕಿ ಇಟ್ಟ ಅಂಗಡಿ ಮಾಲಿಕ – ಪರಿಸರಪ್ರೇಮಿಗಳ ಆಕ್ರೋಶ

ಕೋಟ: ಇಲ್ಲಿನ ತೆಕ್ಕಟ್ಟೆ ಕನ್ನುಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯ ಸಂರಕ್ಷಣೆಯಲ್ಲಿ ನೆಟ್ಟ ಮರಕ್ಕೆ ಸನಿಹದ ಇಲ್ಲಿನ ಗಣೇಶ್ ಸೆರಾಮಿಕ್ಸ್ ಮಾಲಿಕ ಬೆಂಕಿ ಇರಿಸಿ ಮರಕ್ಕೆ ಹಾನಿಗೊಳಿಸಿದ ಘಟನೆ ಸೋಮವಾರ ನಡೆದಿದೆ.
ಈ ಬಗ್ಗೆ ಸ್ಥಳೀಯವೊರ್ವರು ಪ್ರಶ್ನಿಸಿದಕ್ಕೆ ಉಡಾಫೆ ಉತ್ತರ ನೀಡಿದ್ದಾರೆ ಈ ಹಿನ್ನಲ್ಲೆಯಲ್ಲಿ ಸ್ಥಳಕ್ಕೆ ಭೇಟಿ‌ನೀಡಿದ ಪರಿಸರಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು
ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆ ನೆಟ್ಟು‌ಪೋಷಿಸುತ್ತಿರುವ ಮರಗಳಿಗೆ ಹಾನಿಯುಂಟು ಮಾಡಿದ ಘಟನೆಯ ಬಗ್ಗೆ ಸಂಬಂಧಿಸಿದ ಕುಂದಾಪುರ ಅರಣ್ಯ ಇಲಾಖಾಧಿಕಾರಿಗಳು‌ ಭೇಟಿ ನೀಡಿ ಅಂಗಡಿಯ ಮಾಲಿಕನ್ನು ತರಾಟೆ ತೆಗೆದುಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪರಿಸರಪ್ರೇಮಿಗಳ ಆಕ್ರೋಶ:
ಉಡುಪಿ ಜಿಲ್ಲೆಯಲ್ಲಿ ಗಿಡಮರಗಳನ್ನು ಸಂರಕ್ಷಿಸಿ ಪೋಷಿಸುತ್ತಿರುವ ಕೋಟದ ಪಂಚವರ್ಣ ಸಂಘಟನೆ ಮರಗಿಡಗಳಿಗೆ ಹಾನಿಯುಂಟುಮಾಡುವ ಹೀನ ಮನಸ್ಥಿತಿಯ ಬಗ್ಗೆ ಆಕ್ರೋಶ ಹೊರಹಾಕಿದ್ದು ಸ್ಥಳದಲ್ಲಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ರಮೇಶ್ ಮೆಂಡನ್ ಸಾಲಿಗ್ರಾಮ ಹಾಗೂ‌ ಮಾಧ್ಯಮ ಪ್ರತಿನಿಧಿ ಇಬ್ರಾಹಿಂ ಕೋಟ ಘಟನೆಯನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆಯನ್ನು ಆಗ್ರಹಿಸಿದ್ದಾರೆ.