
ಡೈಲಿ ವಾರ್ತೆ: 01/DEC/2025
ಬಿ.ಪಿ.ಲ್ ಪಡಿತರ ಚೀಟಿಯನ್ನು ಎಪಿಲ್ ಗೆ ಪರಿವರ್ತನೆ: ಬಿಜೆಪಿಯಿಂದ ಪ್ರತಿಭಟನೆಯ ಎಚ್ಚರಿಕೆ

ಉಡುಪಿ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ
ಇವರ ವತಿಯಿಂದ ಇಂದು ಜಿಲ್ಲೆಯಾದ್ಯಂತ ಬಡವರ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತನೆ ಮಾಡುತ್ತಿದ್ದು ಇದರಿಂದ ಹಿಂದುಳಿದ ವರ್ಗಗಳ ಬಡವರಿಗೆ ಮತ್ತು ಶ್ರಮಿಕ ವರ್ಗದ ಜನರಿಗೆ ಅನ್ಯಾಯವಾಗುತ್ತಿದ್ದು ಇದರ ಜೊತೆಗೆ ಪರಿವರ್ತನೆಗೊಂಡ ಎಪಿಎಲ್ ಪಡಿತರ ಚೀಟಿಯನ್ನು ಪುನಃ ಸಮರ್ಪಕ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿಯನ್ನಾಗಿ ಮಾಡಲು ತಾಲುಕು ಮಟ್ಟದ ಅಧಿಕಾರಿಗಳ ಬಳಿ ತೆರಳಿದರೆ ಕೊಂಚವೂ ನಾಚಿಕೆ ಇಲ್ಲದೆ ಬಡವ ಶ್ರಮಿಕ ದುಡಿಯುವ ಹಿಂದುಳಿದ ವರ್ಗಗಳ ಜನರ ಬಳಿ 5,000 ರೂಪಾಯಿಗೂ ಹೆಚ್ಚು ಲಂಚ ಬೇಡಿಕೆ ಇಡುತ್ತಾ ಲಂಚ ಪಡೆಯುತ್ತಿದ್ದು ಉಡುಪಿ ಜಿಲ್ಲೆಯ ಎಲ್ಲಾ ತಾಲುಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ, ಹಾಗಾಗಿ ಇದು ನಿಲ್ಲದೆ ಹೋದಲ್ಲಿ ಬಡವರಿಗೆ ಅನ್ಯಾಯವಾಗಲು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸುಮ್ಮನಿರದೆ ನೊಂದವರ ಜೊತೆಯಾಗಿ ಜಿಲ್ಲೆಯ ತಾಲುಕು ಕಚೇರಿ ಹಾಗು ಜಿಲ್ಲಾಧಿಕಾರಿ ಕಚೇರಿಯ ಎದುರು ಬ್ರಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ವಿಜಯ್ ಕೊಡವೂರು, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ತಿಂಗಳಾಯ ಕೋಟ, ಸುರೇಂದ್ರ ಕುಲಾಲ್ ವರಂಗ, ಖಜಾಂಚಿ ರಾಜೇಂದ್ರ ಪಂದುಬೆಟ್ಟು, ಮಾದ್ಯಮ ಪ್ರಮುಖ್ ಸುಶಾಂತ್, ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಕಳ ಮಂಡಲ ಅಧ್ಯಕ್ಷ ಪ್ರಸಾದ್ ಐಸಿರ,ಕಾಪು ಮಂಡಲ ಅಧ್ಯಕ್ಷ ಸಂತೋಷ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಆಶೋಕ್ ಸುವರ್ಣ, ನಾಗರಾಜ್ ಆಚಾರ್,ಆಶೋಕ್ ಸಾಲಿಗ್ರಾಮ ಹಾಗು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.