
ಡೈಲಿ ವಾರ್ತೆ: 01/DEC/2025
ಮೆಲ್ಕಾರ್ ಮಹಿಳಾ ಕಾಲೇಜು ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಬಂಟ್ವಾಳ : ಓದು ಮತ್ತು ಕ್ರೀಡೆ ಎರಡೂ ಬದುಕಿನ ಅತ್ಯವಶ್ಯಕ ಅಂಶವಾಗಿದೆ. ಕ್ರೀಡೆ ಮನಸ್ಸಿಗೆ ಶಿಸ್ತು, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ವಗ್ಗ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಶೇಕ್ ಆದಂ ಸಾಹೇಬ್ ನೆಲ್ಯಾಡಿ ಯವರು ಹೇಳಿದರು.

ಅವರು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಎರಡು ದಿನದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಅಂಜೇಲಿನ ಸುನೀತಾ ಪಿರೇರ, ಕ್ರೀಡಾ ಸಂಯೋಜಕರಾದ ಅಶ್ವಿತಾ ಹಾಗೂ ಹನೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದವಿ ವಿದ್ಯಾರ್ಥಿ ನಾಯಕಿ ಫಾತಿಮಾ ಮಶ್ಮೂಮ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿನಿ ಫಾತಿಮಾ ಝೋಹರ ಸ್ವಾಗತಿಸಿ, ಆಯುಷ ಸೈಮಾ ವಂದಿಸಿದರು. ಕೆ.ಪಿ. ಆಯಿಶತ್ ಸುಹಾನ ಕಾರ್ಯಕ್ರಮ ನಿರೂಪಿಸಿದರು.