ಡೈಲಿ ವಾರ್ತೆ: 02/DEC/2025

ಸೋಮನಹಳ್ಳಿ ಎ.ಪಿ.ಎಸ್ ಪಿಯುಸಿ ಕಾಲೇಜಿನಲ್ಲಿ ವಿಜ್ಞಾನ ಹಾಗೂ ಕಲೆಯ ವಸ್ತುಪ್ರದರ್ಶನ

ಬೆಂಗಳೂರು,ಡಿ.2; ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿ ಅನಂತ ಜ್ಞಾನ ಗಂಗೋತ್ರಿ ಆವರಣದಲ್ಲಿ ಎ.ಪಿ.ಎಸ್ ವಿಜ್ಞಾನ ಮತ್ತು ವಾಣಿಜ್ಯ ಪಿಯುಸಿ ಕಾಲೇಜಿನಿಂದ ವಿಜ್ಞಾನ ಹಾಗೂ ಕಲೆಯ ಅನ್ವೇಷಣೆಯ ಅನಂತ ಲೋಕ ವಿಶೇಷ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಎಪಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿಎ ಡಾ. ವಿಷ್ಣುಭರತ್ ಅಲಂಪಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ವಸ್ತುಪ್ರದರ್ಶನ ಮಜ್ಜಿಗೆಯೊಳಗಿನ ಅದೃಶ್ಯ ಬೆಣ್ಣೆಯನ್ನು ಮಂಥನದ ಮೂಲಕ ಹೊರತೆಗೆಯುವ ಹಾಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಅನೇಕ ಕಲೆ ಮತ್ತು ಕೌಶಲ್ಯಗಳನ್ನು ಹೊರತೆಗೆಯುವುದರಲ್ಲಿ ಯಶಸ್ವಿಯಾಗಿದೆ, ವಿದ್ಯಾರ್ಥಿಗಳು ತಯಾರಿಸಿದ ಜಲ ವಿದ್ಯುತ್, ಬ್ಲೂ ಟೂತ್ ರೋಬೋಟ್, ಆಮ್ಲ ಮಳೆ, ಅಣು ವಿದ್ಯುತ್ ಸ್ಥಾವರ, ತ್ರಯೋಮಿತಿ ಉದ್ಯಾನವನ, 3ಡಿ ಮಾದರಿ, ಗಣಿತದ ಆಟಗಳು, ಅಯೋಡಿನ್ ಪ್ರತಿಕ್ರಿಯೆ, ಭ್ರೂಣ ಬೆಳವಣಿಗೆ, ಕೈಗಾರಿಕಾ ತ್ಯಾಜ್ಯ ನಿರ್ವಹಣೆ, ಹೇಮೋ ಡಯಾಲಿಸಿಸ್, ಗ್ರಾಮೀಣ ಮತ್ತು ನಗರಾಭಿವೃದ್ಧಿ, ಮಧುರೈ ಮೀನಾಕ್ಷಿ ದೇವಾಲಯ, ಅಯೋಧ್ಯಾ ಶ್ರೀ ರಾಮ ಮಂದಿರ ಹೀಗೆ ಹಲವು ವೈಶಿಷ್ಟ್ಯಗಳು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಹಲವಾರು ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದು, 500 ರಿಂದ 1000 ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ಪ್ರದರ್ಶನ ಲಾಭ ಪಡೆದಿದ್ದಾರೆ.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ ಪ್ರಕಾಶ್ , ಟ್ರಸ್ಟೀ ರಾಮ್ ಪ್ರಸಾದ್, ವಿಧ್ಯಾರ್ಥಿಗಳು , ಪ್ರಾಂಶುಪಾಲರು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿತ್ತು.