
ಡೈಲಿ ವಾರ್ತೆ: 21/DEC/2025
ಕೋಟೇಶ್ವರ ಎಸ್.ಎಲ್.ಆರ್.ಎಂ ಘಟಕಕ್ಕೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ನಷ್ಟ

ಕುಂದಾಪುರ: ಕೋಟೇಶ್ವರ ಪಂಚಾಯತ್ ಗೆ ಸೇರಿರುವ ಎಸ್.ಎಲ್.ಆರ್.ಎಂ. ಒಣ ತ್ಯಾಜ್ಯ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ ಮೌಲ್ಯದ ಸ್ವತ್ತುಗಳು ಹಾನಿಯಾದ ಘಟನೆ ಭಾನುವಾರ ಮುಂಜಾನೆ
ಕೋಟೇಶ್ವರದಲ್ಲಿ ನಡೆದಿದೆ.


ಪಂಚಾಯತ್ ಕೆಳಭಾಗದಲ್ಲಿ ವಾಣಿಜ್ಯ ಕಟ್ಟಡ ಇದ್ದು ಮೇಲ್ಭಾಗದಲ್ಲಿ ತ್ಯಾಜ್ಯ ಒಣ ಘಟಕ ಮಾಡಿದ್ದು ಅಲ್ಲಿ ಶೇಖರಣೆ ಮಾಡಿ ಇಟ್ಟಿದ್ದ ಒಣ ತ್ಯಾಜ್ಯಕ್ಕೆ ಆಕಸ್ಮಿಕ ಬೆಂಕಿ ತಗಲಿ ಒಣ ತ್ಯಾಜ್ಯಗಳು, ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ವಾಣಿಜ್ಯ ಸಂಕಿರಣದ ಕಟ್ಟಡ ಮಹಡಿಗೆ ಹಾನಿಯಾಗುವ ಸಂಭವ ಇದ್ದು ತಕ್ಷಣ ಬೈಂದೂರು ಮತ್ತು ಕುಂದಾಪುರ ಅಗ್ನಿಶಾಮಕ ದಳದವರು ಸ್ಥಳಕ್ಕಾಗಿಮಿಸಿ , ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.