
ಡೈಲಿ ವಾರ್ತೆ: 31/DEC/2025
ಸಂಬಾರ ತೋಟ: ಬಸ್ಸು ತಂಗುದಾಣ ನಿರ್ಮಾಣಕ್ಕೆ ಶಿಲಾನ್ಯಾಸ

ಪಜೀರು : ಡಿ31; ಪಜೀರು ಗ್ರಾಮ ಪಂಚಾಯತ್ ಗೆ ಒಳಪಡುವ ಸಾಂಬಾರತೋಟ ಪ್ರದೇಶದಲ್ಲಿ ನೂತನ ಬಸ್ಸು ತಂಗುದಾಣಕ್ಕೆ ಶಿಲಾನ್ಯಾಸ ಕಾರ್ಯವು ಎಸ್.ಡಿ.ಪಿ.ಐ ಪಜೀರು ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಪಜೀರು ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಅರ್ಕನರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಿಲಾನ್ಯಾಸವನ್ನು ಸಂಬಾರ ತೋಟದ ನೂರಾನೀಯ ಜುಮಾ ಮಸೀದಿ ಮುದರ್ರಿಸ್ ಬಹುಮಾನ್ಯರಾದ ಐ.ಪಿ ಅಬ್ದುಲ್ ರಝಾಕ್ ಅಹ್ಸನಿ ಉಸ್ತಾದರು ಪ್ರಾರ್ಥನೆ ಮೂಲಕ ನೆರವೇರಿಸಿದರು.
ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಪಜೀರು ಗ್ರಾಮ ಪಂಚಾಯತ್ ಸದಸ್ಯರಾದ ಸಪೀಕ್ ಅರ್ಕನರವರು ಗ್ರಾಮದ ಅಭಿವೃದ್ಧಿಗಾಗಿ ಸದಸ್ಯರುಗಳು ನಿಸ್ವಾರ್ಥ ಸೇವೆಗಳನ್ನು ಮಾಡುತ್ತಿದ್ದಾರೆ ಇದರ ಮುಂದುವರಿದ ಭಾಗವಾಗಿ ಪಂಚಾಯತ್ ಅನುದಾನದ ಮೂಲಕ ಶೀಘ್ರದಲ್ಲೆ ಸಾರ್ವಜನಿಕರಿಗೆ ಸುಸಜ್ಜಿತವಾದ ಬಸ್ಸು ತಂಗುದಾಣವನ್ನು ನಿರ್ಮಿಸುವುದಾಗಿ ಪ್ರಾಸ್ತಾವಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಪಿ.ಐ ದೇರಳಕಟ್ಟೆ ಬ್ಲಾಕ್ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ಬೋಳಿಯಾರ್ ರವರು ಎಸ್.ಡಿ.ಪಿ.ಐ ಬೆಂಬಲಿತ ಪಜೀರು ಗ್ರಾಮ ಪಂಚಾಯತ್ ಸದಸ್ಯರುಗಳು ಗ್ರಾಮ ಅಭಿವೃದ್ಧಿಗಾಗಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುವುದರೊಂದಿಗೆ ಸರಕಾರದ ಅನುದಾನಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಮೂಲಕ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವುದನ್ನು ಶ್ಲಾಘಿಸಿದರು.
ಯುವ ನ್ಯಾಯವಾದಿ ಅಸ್ಗರ್ ರವರು ಮತನಾಡಿ ಗ್ರಾಮದಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಸಿರಾಜ್ ಅರ್ಕನ ಹಾಗೂ ಸಪೀಕ್ ಅರ್ಕನ ತಕ್ಷಣ ಸಿಗುವವರಾಗಿದ್ದಾರೆ ಗ್ರಾಮದ ಅಭಿವೃದ್ಧಿಯಲ್ಲಿ ಈ ಸದಸ್ಯರುಗಳ ಪಾತ್ರ ಪ್ರಮುಖವಾಗಿದೆ ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ನೂರಾನೀಯ ಜುಮ್ಮಾ ಮಸೀದಿ ಸಂಬಾರತೋಟ ಇದರ ಅಧ್ಯಕ್ಷರಾದ ಇಬ್ರಾಹಿಂ ಹಾಜಿ, ಎಸ್.ಡಿ.ಪಿ.ಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಜುನೈದ್ ಆರ್ ಕೆ ಸಿ , ಆಟೋ ರಾಜಕನ್ಮಾರ್ ಚಾಲಕರ ಯೂನಿಯನ್ ಜಿಲ್ಲಾಧ್ಯಕ್ಷರಾದ ಸಿದ್ದೀಕ್, ಪಜೀರು ಗ್ರಾಮ ಪಂಚಾಯತ್ ಸದಸ್ಯೆಯರಾದ ಸುನಿತಾ ಸಾಲ್ದಾಣ, ಸುಮ್ಮಯ್ಯ ಉಮರ್, ಮುಖಂಡರಾದ ಸಿದ್ದೀಕ್ ಅರ್ಕನ ರವಿ ಕುಟಿನೋ ಹಸೈನಾರ್ ಕೊಣಾಜೆ, ಸಂಬಾರ ತೋಟ ವಾರ್ಡ್ ಅಧ್ಯಕ್ಷರಾದ ಶಂಶುದ್ದೀನ್ ಹಾಗೂ ಊರಿನ ಪ್ರಮುಖರಾದ ಇಬ್ರಾಹಿಂ,ರಿಯಾಜ್, ಅಬೂಬಕ್ಕರ್, ಶೇಕ್,ತಬ್ಸರ್, ಶಬೀರ್ ಮುಂತಾದ ಹಲವಾರು ನಾಯಕರುಗಳು ಉಪಸ್ಥಿತರಿದ್ದರು.