ಡೈಲಿ ವಾರ್ತೆ:JAN/03/2026

ಬ್ರಹ್ಮಾವರ | ಆಲದ ಮರದಲ್ಲಿ ಆಕಸ್ಮಿಕ ಬೆಂಕಿ – ಕ್ಷಣಾರ್ಧದಲ್ಲೇ ಧಗಧಗನೇ ಹೊತ್ತಿ ಉರಿದ ಮರ

ಬ್ರಹ್ಮಾವರ, ಜ. 03: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೃಹತ್ ಗಾತ್ರದ ಆಲದ ಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಧಗ ಧಗನೇ ಹೊತ್ತಿ ಉರಿದ ಘಟನೆ ನಡೆದಿದೆ.

ಏಕಾಏಕಿ ಆಲದ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಇಡೀ ಆಲದ ಮರಕ್ಕೆ ವಿಸ್ತರಿಸಿದೆ. ಕೂಡಲೇ ಉಡುಪಿ ಅಗ್ನಿಶಾಮಕ ಠಾಣೆಗೆ ಸ್ಥಳೀಯರಾದ ಗಣೇಶ್ ಶೆಟ್ಟಿ ಅವರು ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಉಡುಪಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಸತೀಶ್, ಸುಧೀರ್, ಅಮರ್ ಕಟ್ಟಿ, ಶಭಾಜ್ ಖಾನ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.