ಡೈಲಿ ವಾರ್ತೆ:JAN/03/2026

ಗುಂಪು ಘರ್ಷಣೆ| ಪರಿಸ್ಥಿತಿ ಅವಲೋಕಿಸಲು ಬಳ್ಳಾರಿಗೆ ಕಾಂಗ್ರೆಸ್ ನಿಯೋಗ

ಬೆಂಗಳೂರು, ಜ. 03: ಬಳ್ಳಾರಿ ಘಟನೆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಲು ಪಕ್ಷದ ಮುಖಂಡರ ನಿಯೋಗವನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ರಚಿಸಿದ್ದಾರೆ.

ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕ ಟಿ.ರಘುಮೂರ್ತಿ, ಸಂಸದ ಜಿ.ಕುಮಾರ ನಾಯಕ್, ಪರಿಷತ್ ಸದಸ್ಯರಾದ ಜಕ್ಕಪ್ಪನವ‌ರ್, ಬಸವನಗೌಡ ಬಾದರ್ಲಿ ಈ ನಿಯೋಗದಲ್ಲಿದ್ದಾರೆ.