ಡೈಲಿ ವಾರ್ತೆ:JAN/07/2026

ಕುಂದಾಪುರ| ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಜಾಮಿಯಾ ಟ್ರೋಫಿ – 2026

ಕುಂದಾಪುರ: ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕುಂದಾಪುರ ಇವರ ಆಶ್ರಯದಲ್ಲಿ ಸತತ 24 ನೇ ವರುಷದ ಜಾಮಿಯಾ ಟ್ರೋಫಿ – 2026ರ ಕ್ರಿಕೆಟ್ ಪಂದ್ಯಾಟ ಜ. 2, 3, 4 ರಂದು ಕುಂದಾಪುರ ಜಾಮಿಯಾ ಮಸ್ಜಿದ್ ವಠಾರದಲ್ಲಿ ನಡೆಯಿತು.

ಈ ಪಂದ್ಯಾಟ ಕೂಟದಲ್ಲಿ 20 ತಂಡಗಳು ಬಾಗವಹಿಸಿದ್ದವು. ಸೆಮಿ ಫೈನಲ್ ಹಂತದಲ್ಲಿ ಟೌನ್ ತಂಡವು ಲಕ್ಕಿಸ್ಟಾರ್ ಕೋಡಿ ಯನ್ನು ಸೋಲಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿತು.

2ನೇ ಸೆಮಿಫೈನಲ್‌ನಲ್ಲಿ ಟೌನ್ HS ಮಾವಿನಕಟ್ಟೆ ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಟೌನ್ HS ಮತ್ತು ಟೌನ್ ತಂಡಗಳ ತಂಡಗಳ ನಡುವೆ ನಡೆದ ಪಂದ್ಯಾಟ ದಲ್ಲಿ ಟೌನ್‌ಎಚ್‌ಎಸ್ ಜಾಮಿಯಾ ಟ್ರೋಫಿ 2026ರ ಚಾಂಪಿಯನ್ ಆಗಿ ಮೂಡಿ ಬಂದಿತ್ತು.
ಟೌನ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟು ಮುನಾಫ್ ಮತ್ತು ಇಮ್ರಾನ್ ಮಾಲಿಕತ್ವದ ಟೌನ್ ಹಾಗೂ ಟೌನ್ HS ವಿಜಯಶಾಲಿಯಾದವು.
ಸರಣಿ ಶ್ರೇಷ್ಠನಾಗಿ ಟೌನ್ HS ತಂಡದ ಇರ್ಷಾದ್, ಅತ್ಯುತ್ತಮ ಬೌಲರ್ ಟೌನ್‌ ತಂಡದ ಇಮ್ರಾನ್, ಅತ್ಯುತ್ತಮ ಬ್ಯಾಟ್ಸ್‌ಮನ್ ಲಕ್ಕಿ ಸ್ಟಾರ್ ಕೋಡಿಯ ಅಲ್ತಾಫ್ ಕೊಡಿ ಬೆಸ್ಟ್ ಕೀಪರ್ ಟೌನ್ ಸತ್ತಾರ್ ಆಯ್ಕೆಯದರು.