
ಡೈಲಿ ವಾರ್ತೆ:JAN/07/2026
ಗಂಗಾವಳಿ| ಜ.19 ರಿಂದ 25ರ ವರೆಗೆ ನಡೆಯುವ ಮೂಹಿಯುದ್ದಿನ್ ಜಾಮಿಯಾ ಮಸೀದಿ ವಾರ್ಷಿಕೋತ್ಸವದ ಪೋಸ್ಟರ್ ಬಿಡುಗಡೆ

ಗಂಗಾವಳಿ: ಮೂಹಿಯುದ್ದಿನ್ ಜಾಮಿಯ ಮಸೀದಿ ಗಂಗಾವಳಿಯಲ್ಲಿ ಗೌರವಾಧ್ಯಕ್ಷರಾದ ಖುದುವಾತುಸ್ಸಾದಾತ್ ಆಸಯ್ಯದ್ ಮುಹಮ್ಮದ್ ಆಟಕೋಯ ತಂಗಳ್ ಇವರ ನೇತೃತ್ವದಲ್ಲಿ ವರ್ಷ ಪ್ರತಿ ಆಚರಿಸಿಕೊಂಡು ಬರುತ್ತಿರುವ ಪಳ್ಳಿ ನೇರ್ಚೆ ಜನವರಿ 19 ರಿಂದ ಪ್ರಾರಂಭಗೊಂಡು ಜನವರಿ 25 ರಂದು ಕೊನೆಗೊಳ್ಳಲಿದೆ.

ಈ ಕಾರ್ಯಕ್ರಮಕ್ಕೆ ದೀನಿ ನೇತಾರರು ಉಲಮಾ ಪಂಡಿತರು ಹಾಗು ಮತ ಪ್ರಭಾಷಣಕಾರರು ಭಾಗವಹಿಸಲಿದ್ದು ಹಾಗು ಜಾಲಾಲಿಯ್ಯ ರಾತಿಬ್ ಕುತಿಬಿಯ್ಯತ್ ಮೌಲಿದ್ ಕಾರ್ಯಕ್ರಮ ನಡೆಯಲಿದೆ. ಹಾಗು ಡಾ. ಕೋಯಾ ಕಾಪಾಡ್ ಅವರ ಕಾರ್ಯಕ್ರಮ ಕೂಡ ನಡೆಯಲಿದ್ದು. ಕಾರ್ಯಕ್ರಮದ ಪೋಸ್ಟರ್ ಇಂದು ಮೂಹಿಯುದ್ದಿನ್ ಜಾಮಿಯ ಮಸೀದಿಯ ಗೌರವಧ್ಯಕ್ಷರಾದ ಖುದುವಾತುಸ್ಸಾದಾತ್ ಅಸಯ್ಯದ್ ಮುಹಮ್ಮದ್ ಆಟಕೋಯಾ ತಂಗಳ್ ರ ಮೂಲಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮೂಹಿಯುದ್ದಿನ್ ಜಾಮಿಯ ಮಸೀದಿಯ ಅಧ್ಯಕ್ಷರಾದ ನಜೀರ್ ಅಬ್ದುಲ್ ಖಾದರ್ ಸಾಹೇಬ್. ಕಮಿಟಿಯ ಸದಸ್ಯರಾದ ಹುಸೇನ್ ಎಂ ಬಿಜಾಪುರ್ ಅಬ್ದುಲ್ ಅಝಿಜ್ ಸಿದ್ದಿಕ್ ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಪಳ್ಳಿ ನೇರ್ಚೆ ಕಾರ್ಯಕ್ರಮಕ್ಕೆ ಎಲ್ಲರು ಭಾಗವಹಿಸಬೇಕಾಗಿ ಆಡಳಿತ ಕಮಿಟಿ ಆಮಂತ್ರಣ ನೀಡುತ್ತಿದೆ. ಕಾರ್ಯಕ್ರಮದ ಕೊನೆಯ ದಿವಸ ದುವಾ ಮಜ್ಲಿಸ್ ಹಾಗು ತಬರ್ರುಕ್ ವಿತರಣೆ ಇರುತ್ತದೆ.