ಡೈಲಿ ವಾರ್ತೆ:JAN/07/2026

ಪುತ್ತೂರು| ನೂರಾನಿ ಫ್ಯಾಮಿಲೀ ಟ್ರಸ್ಟ್ ಬೆಟ್ಟಂಪಾಡಿ ಇದರ ಒಂಭತ್ತನೇ ವಾರ್ಷಿಕ ಕುಟುಂಬ ಸಂಗಮ

ಪುತ್ತೂರು : ನೂರಾನಿ ಫ್ಯಾಮಿಲೀ ಟ್ರಸ್ಟ್ ಬೆಟ್ಟಂಪಾಡಿ ಇದರ ಒಂಭತ್ತನೇ ವಾರ್ಷಿಕ ಕುಟುಂಬ ಸಂಗಮವು ಇತ್ತೀಚೆಗೆ ಬೆಟ್ಟಂಪಾಡಿ ಅರ ಹೌಸ್ “ತೊಟ್ಟಿ ಮಾಹಿನ್ ಉಸ್ತಾದ್ ವೇದಿಕೆ” ಯಲ್ಲಿ ನಡೆಯಿತು.

ಟ್ರಸ್ಟ್ ಅಧ್ಯಕ್ಷ ಮೂಸಲ್ ಮದನಿ ಕಕ್ಕೂರು ಅಧ್ಯಕ್ಷತೆಯಲ್ಲಿ ನಡೆದ ಕುಟುಂಬ ಸಂಗಮವನ್ನು ಅಬೂಬಕರ್ ಸಅದಿ ಕುಕ್ಕಾಜೆ ಉದ್ಘಾಟಿಸಿದರು.

ನಸೀಹ್ ದಾರಿಮಿ ಚೆಂಗಳ, ಇಸ್ಮಾಯಿಲ್ ಸಅದಿ ಅಂಕತ್ತಳ ಸಂದರ್ಭೋಚಿತವಾಗಿ ಮಾತನಾಡಿದರು. ಕುಟುಂಬದ ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಅಂಕತ್ತಳ, ಮುಹಮ್ಮದ್ ಪಳ್ಳಿತ್ತರು, ಮುಹಮ್ಮದ್ ಕುಂಞಿ ಅಂಕತ್ತಳ , ಶರೀಫ್ ನಿಡ್ಪಳ್ಳಿ, ಫಾರೂಕ್ ಕೊಡಾಜೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮುಂದಿನ ಹತ್ತನೇ ವಾರ್ಷಿಕ ಸಂಗಮದ ದಿನಾಂಕ ಘೋಷಣೆ ಮತ್ತು ಲೋಗೋ ಬಿಡುಗಡೆ ಮಾಡಲಾಯಿತು.
ಕುಟುಂಬದ ಹಿರಿಯರಾದ ಆಲಿ ಕುಂಞಿಪಟ್ಟೆ ಮತ್ತು ಕಳೆದ ಬಾರಿಯ ಮದ್ರಸ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ 100 ಅಂಕ ಪಡೆದು ವಿಶಿಷ್ಟ ಸಾಧನೆಗೈದ ಮುಹಮ್ಮದ್ ರಾಶಿದ್ ಬೆಳಂದೂರು ಇವರನ್ನು ಸನ್ಮಾನಿಸಲಾಯಿತು. ಕುಟುಂಬದ ಪುಟಾಣಿಗಳಿಂದ ಹಾಡು, ಭಾಷಣ, ಬುರ್ದಾ ಮುಂತಾದ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ನೂರಾನಿ ಫ್ಯಾಮಿಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿ, ವಂದಿಸಿದರು.