

ಡೈಲಿ ವಾರ್ತೆ:JAN/17/2026
ಮಾಣಿ : ರಾಷ್ಟ್ರೀಯ ಹೆದ್ದಾರಿ ಸೂರಿಕುಮೇರು ವಿನಲ್ಲಿ ಕ್ರಾಸಿಂಗ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ವಿಟ್ಲ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸೂರಿಕುಮೇರು ಜಂಕ್ಷನ್ ಸಮೀಪ ಯಾವುದೇ ರಸ್ತೆ ವಿಭಾಜಕ (ಕ್ರಾಸಿಂಗ್) ನೀಡುವಂತೆ ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬರಿಮಾರು ಮಹಮ್ಮಾಯಿ ದೇವಸ್ಥಾನ, ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿ, ಮತ್ತು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಸಂಪರ್ಕಿಸಲು ಹಾಗೂ ಬರಿಮಾರು ಸರಪಾಡಿ ಸಂಪರ್ಕ ಸೂರಿಕುಮೇರು ಕೋರ್ಯ ಸಂಪರ್ಕ ಇನ್ನಿತರ ಒಳ ರಸ್ತೆಗಳ ಸಂಪರ್ಕವು ಕಷ್ಟಕರ ವಾಗಿರುವುದರಿಂದ ಜನರು ಮತ್ತು ವಾಹನ ಚಾಲಕರು ಸಂಕಷ್ಟದಲ್ಲಿದ್ದು, ಕೂಡಲೇ ಈ ಭಾಗದಲ್ಲಿ ಕ್ರಾಸಿಂಗ್ ನೀಡುವ ಮೂಲಕ ಸಮಸ್ಯೆ ಪರಿಹಾರಗೊಳಿಸಬೇಕು. ಕ್ರಾಸಿಂಗ್ ನೀಡದೇ ಇದ್ದಲ್ಲಿ ಒಂದೆರಡು ಕಿಲೋಮೀಟರ್ ಸುತ್ತಿ ಕ್ರಾಸಿಂಗ್ ಮಾಡುವ ಸಂಕಷ್ಟ ಇದುರಿಸಬೇಕಾಗಿದೆ, ಇದರಿಂದ ಸೂರಿಕುಮೇರು ಬರಿಮಾರು ಪ್ರದೇಶದ ಜನತೆ ಮತ್ತು ವಾಹನ ಚಾಲಕರು ವಿದ್ಯಾರ್ಥಿಗಳು ಬಹಳ ಸಂಕಷ್ಟ ಪಡುತ್ತಿದ್ದು ಹಳೀರದಿಂದ ಸೂರಿಕುಮೇರು ಮಧ್ಯೆ ಕ್ರಾಸಿಂಗ್ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು,
ಸಮಸ್ಯೆಗೆ ಒಂದು ತಿಂಗಳ ಒಳಗೆ ಪರಿಹರಿಸದಿದ್ದಲ್ಲಿ ಪ್ರತಿಭಟನೆ ಮುಂದುವರಿಯುವುದು ಎಂದು ಎಚ್ಚರಿಕೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರುಗಳಾದ ಬಾಲಕೃಷ್ಣ ಆಳ್ವ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಪ್ರಮುಖರಾದ ಹಸೈನಾರ್ ಸಂಕ, ಕೃಷ್ಣಪ್ಪ, ವಸಂತ, ರೋನಿ ಬೋನಿಸ್, ಸತೀಶ್ ಪ್ರಭು, ಲಕ್ಷೀ ನಾರಾಯಣ, ಹನೀಫ್ ಸಂಕ, ಮುಜೀಬ್ ಸಹಿತ ನೂರಾರು ಸ್ಥಳೀಯ ಹಿಂದೂ, ಮುಸ್ಲಿಂ, ಕ್ರೈಸ್ತ ಮುಖಂಡರು ಹಿರಿಯ ನೇತಾರರು ಭಾಗವಹಿಸಿದ್ದರು.
ಮನವಿ ಸ್ವೀಕರಿಸಿದ ಹೆದ್ದಾರಿ ಕಾಮಗಾರಿ ಇಲಾಖೆಯ ಇಂಜಿನಿಯರ್ ಬಿನೋದ್ ಹಾಗೂ ಅವರ ಚಿದಾನಂದ ಅವರು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.