

ಡೈಲಿ ವಾರ್ತೆ:JAN/17/2026
ಕುಂದಾಪುರ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಮಾತೃವಂದನಾ ಕಾರ್ಯಕ್ರಮ: ಬೆಳಕಿನ ಮಹತ್ವವನ್ನ ಅರ್ಥಮಾಡ್ಕೊಂಡ್ರೆ, ದೀಪ ಹಚ್ಚೋದ್ರ ಅರ್ಥ ಅರ್ಥವಾಗುತ್ತೆ – ಎನ್. ಆರ್. ದಾಮೋದರ ಶರ್ಮ

ಕುಂದಾಪುರ: ಬೆಳಕಿನ ಮಹತ್ವವನ್ನ ಅರ್ಥಮಾಡ್ಕೊಂಡ್ರೆ, ದೀಪ ಹಚ್ಚೋದ್ರ ಅರ್ಥ ಅರ್ಥವಾಗುತ್ತೆ.
ಬೆಳಕು ಜೀವನದ ಸಂಕೇತ, ಕತ್ತಲೆಯ ನಿವಾರಣೆ, ಸಂಬಂಧಗಳ ಬೆಳವಣಿಗೆಗೆ ಕಾರಣ. ನಾವೆಲ್ಲ ಬೆಳಗಬೇಕು, ಬೆಳೆಯಬೇಕು ಅನ್ನೋದೇ ದೀಪ ಪ್ರಜ್ವಲನೆಯ ಮೂಲ ಉದ್ದೇಶ ಎಂದು ಎನ್. ಆರ್. ದಾಮೋದರ ಶರ್ಮ ಬಾರಕೂರು ಅವರು ಹೇಳಿದರು. ಅವರು ಜ.17ರಂದು ಶನಿವಾರ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಸುಣ್ಣಾರಿ, ಕುಂದಾಪುರ ಇವರ ಆಶ್ರಯದಲ್ಲಿ ನಡೆದ ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮೊಬೈಲ್‌ಗೆ ಅಂಟಿಕೊಂಡ್ರೆ ಅವ್ರ ಭವಿಷ್ಯ ಹಾಳಾಗುತ್ತೆ ಶಾಲೆಯ ನಿಯಮಗಳನ್ನು ಪಾಲಿಸುವುದರಿಂದ ವಿದ್ಯಾರ್ಥಿಗಳು ಶಿಸ್ತು ಕಲಿಯುತ್ತಾರೆ. ಒಂದು ವೇಳೆ ಶಾಲೆಯ ನಿಯಮ ಪಾಲಿಸದಿದ್ರೆ, ಭವಿಷ್ಯದಲ್ಲಿ ಜೀವನದಲ್ಲಿ ಮುಂದಕ್ಕೆ ಬರೋಕೆ ಕಷ್ಟ ಆಗುತ್ತದೆ. ಆದ್ದರಿಂದ ಪೋಷಕರು ಮತ್ತೆ ಶಿಕ್ಷಕರು ಮಕ್ಕಳನ್ನು ಮೊಬೈಲ್ ಯಿಂದ ದೂರವಿಡೋಕೆ ಪ್ರಯತ್ನ ಪಡ್ಬೇಕು ಎಂದು ದಾಮೋದರ ಶರ್ಮಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಎಂ. ಹೆಗ್ಡೆ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ವಹಿಸಿ ಮಾತನಾಡಿ ತಂದೆ-ತಾಯಿ ಮಕ್ಕಳಿಗೆ ನೀಡುವ ಕೊಡುಗೆ ಅಪಾರ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಜೊತೆಗೆ, ಗುರು ಹಿರಿಯರನ್ನು ಪೂಜ್ಯ ಭಾವನೆಯಿಂದ ನೋಡುವ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಮಹತ್ವದ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಮಾತನಾಡಿ ನಾವು ಎಲ್ಲಾ ದೇವರುಗಳನ್ನು ಪೂಜಿಸುತ್ತೇವೆ. ಆದರೆ ನಮಗೆ ಕಣ್ಣಿಗೆ ಕಾಣುವ ದೇವರು ಅಂದ್ರೆ ತಂದೆತಾಯಿ.
ಮಕ್ಕಳಿಗೆ ತಂದೆ ತಾಯಿಯರ ಬಗ್ಗೆ ಗೌರವ, ಭಕ್ತಿ ಬೆಳೆಸುವುದು ತುಂಬಾ ಮುಖ್ಯ. ಆದ್ದರಿಂದ ನಮ್ಮ ಈ ಸಂಸ್ಥೆ ಇಂತಹ ಮಾತೃವಂದನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನಾಗರಾಜ್ ಶೆಟ್ಟಿ ಹೇಳಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಪೋಷಕರಾದ ರಮೇಶ್ ಎನ್. ಮತ್ತು ಶ್ರೀಮತಿ ಶಾಂತ ಅವರನ್ನು ಸನ್ಮಾನಿಸಲಾಯಿತು.
ಅಲ್ಲದೆ ಚೆಸ್ ಆಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ವಿದ್ಯಾರ್ಥಿನಿ ಆರಾಧ್ಯ ಎಸ್ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.


ಸಂಸ್ಥೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸರೋಜಿನಿ ಬಿ ಆಚಾರ್ಯ ಕಾರ್ಯಕ್ರಮವನ್ನು ಸ್ವಾಗತಿಸಿದರು.
ಉಪನ್ಯಾಸಕಿ ಶ್ರೀಮತಿ ದಿವ್ಯಾ ಶೆಟ್ಟಿ ನಿರೂಪಿಸಿದರು.
ಸಿಬಿಎಸ್ ಸಿ ಸಂಯೋಜಕಿ ಶ್ರೀಮತಿ ವಿಶಾಲ್ ಶೆಟ್ಟಿ ವಂದಿಸಿದರು.