

ಡೈಲಿ ವಾರ್ತೆ:JAN/17/2026
ಕೋಟತಟ್ಟು ಗ್ರಾ. ಪಂ ವತಿಯಿಂದ ಕೊರಗ ಕಾಲೋನಿಯಲ್ಲಿ 8 ಹೊಸ ಮನೆ ನಿರ್ಮಾಣಕ್ಕೆ ನಾಡೋಜ ಜಿ ಶಂಕರ ಅವರಿಂದ 3 ಲಕ್ಷ ರೂಪಾಯಿ ಚೆಕ್ ವಿತರಣೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ರೂಪಾಯಿ 96 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊರಗ ಕಾಲೋನಿಯ ಎಂಟು ಹೊಸ ಮನೆ ನಿರ್ಮಾಣಕ್ಕೆ ಶ್ರೀ ನಡೋಜ ಜಿ ಶಂಕರ ಅವರು 3 ಲಕ್ಷ ಸಹಾಯ ಧನ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೊರಗರ ಎಂಟು ಹೊಸ ಮನೆ ನಿರ್ಮಾಣ ಕಾರ್ಯ ಶ್ಲಾಘನೀಯ. ಇಂದು ಸಹಾಯ ಧನ ಚೆಕ್ ವಿತರಿಸುತ್ತಿರುವ ಬಗ್ಗೆ ಖುಷಿ ಇದೆ. ಇಲ್ಲಿಯ ಮೂಲ ನಿವಾಸಿಗಳಿಗೆ ಹೊಸ ಎಂಟು ಮನೆ ನಿರ್ಮಿಸಿ ಕೊಡುವ ಮೂಲಕ ಕೋಟತಟ್ಟು ಗ್ರಾಮ ಪಂಚಾಯತ್ ಇತರ ಗ್ರಾಮ ಪಂಚಾಯತ್ ಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ಹೇಳಿದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಸತೀಶ್ ಕುಂದರ್ ಬಾರಿಕೆರೆ ಅವರು ಮಾತನಾಡಿ “ತಳಮಟ್ಟದ ಸಮುದಾಯವನ್ನು ಮೇಲಕ್ಕೆತ್ತುವ ಕಲ್ಯಾಣ ಕಾರ್ಯಕ್ಕೆ ಸಹಾಯ ಧನ ನೀಡಿದ ಶ್ರೀಯುತರಿಗೆ ಕೃತಜ್ಞತೆ ಸಲ್ಲಿಸಿದರು
ಈ ಸಂಧರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಪಂಚಾಯತ್ ಸದಸ್ಯರಾದ ವಾಸು ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಹಾಗೂ ಉದ್ಯಮಿ ಸುರೇಶ್ ಕಾಂಚನ ಬಾರಿಕೆರೆ , ಹಾಗೂ ಸಿಎ ಬ್ಯಾಂಕ್ ನಿರ್ದೇಶಕರು ರಂಜಿತ್ ಕುಮಾರ್ ಬಾರಿಕೆರೆ ಮತ್ತು ಕೊರಗ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.