ಡೈಲಿ ವಾರ್ತೆ:JAN/18/2026

ಸೈಬರ್ ಮೋಸ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಚಾಂತಾರು ಗ್ರಾಮದ ಓರ್ವ ವ್ಯಕ್ತಿ ಸೈಬರ್ ಮೋಸಕ್ಕೆ ಬಲಿಯಾಗಿದ್ದಾರೆ.

Investec Securities India Private Limited ಎಂಬ ಕಂಪೆನಿಯ ಹೆಸರಿನಲ್ಲಿ ಫೇಸ್ ಬುಕ್ ಖಾತೆಗೆ ಬಂದ ಜಾಹಿರಾತು ನೋಡಿ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಆಸಕ್ತಿಯಿಂದ ಅವರು ನೀಡಿದ್ದ ನಂಬರಿಗೆ ವಾಟ್ಸ್ ಅಪ್ ಮೂಲಕ ಸಂಪರ್ಕಿಸಿ 29.02.2025 ರಿಂದ 12.12.2025ರ ಮಧ್ಯಾವಧಿಯಲ್ಲಿ ತಮ್ಮ Union Bank of India SB A/C No ನಿಂದ ಹಂತ ಹಂತವಾಗಿ ಒಟ್ಟು ರೂ. 4,71,000/- ಹಣವನ್ನು ಆರೋಪಿತರು ತಿಳಿಸಿದ ಖಾತೆಗಳಿಗೆ UPI ಹಾಗೂ Mobile Banking ಮೂಲಕ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ಕ್ರಮಾಂಕ:13/2026 ಕಲಂ:66(C),66(D)IT ACT ರಂತೆ ತನಿಖೆ ನಡೆಯುತ್ತಿದೆ.