ಡೈಲಿ ವಾರ್ತೆ:JAN/18/2026

ಕ್ಷೀರ ಸಂಜೀವಿನಿ ಯೋಜನೆಯ ದಶಮಾನೋತ್ಸವ – ಶ್ರೀಮತಿ ಸುಲೇಖಾ ಎಸ್. ಶೆಟ್ಟಿ ಅವರಿಗೆ ಮಹಿಳಾ ಅತ್ಯುತ್ತಮ ಕೃತಕ ಗರ್ಭಧಾರಣ ಕಾರ್ಯಕರ್ತರ ಅಭಿನಂದನೆ

  • ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ. ಕುಂದಾಪುರ

ಬೆಂಗಳೂರು: ಕ್ಷೀರ ಸಂಜೀವಿನಿ ಯೋಜನೆಯ ದಶಮನೋತ್ಸವ ಪ್ರಯುಕ್ತ ನಡೆದ ಪ್ರಗತಿಪರ ಮಹಿಳಾ ಹೈನುಗಾರರ ಸಮಾವೇಶ ಮತ್ತು ತಾಂತ್ರಿಕ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಸುಲೇಖಾ ಎಸ್. ಶೆಟ್ಟಿ ಅವರನ್ನು ಮಹಿಳಾ ಅತ್ಯುತ್ತಮ ಕೃತಕ ಗರ್ಭಧಾರಣ ಕಾರ್ಯಕರ್ತರಾಗಿ ಗೌರವಿಸಲಾಯಿತು.

ಸುಲೇಖಾ ಶೆಟ್ಟಿ ಕೈಲ್ ಕೆರೆ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಾಹಕರಾಗಿದ್ದು, ಕೃತಕ ಗರ್ಭಧಾರಣೆಯಲ್ಲಿ ನೂರಾರು ಜಾನುವಾರುಗಳ ಆರೋಗ್ಯದ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ಕುಟುಂಬಗಳ ಬದುಕಿಗೆ ಬೆಳಕಾಗಿದ್ದಾರೆ.