ಡೈಲಿ ವಾರ್ತೆ:JAN/18/2026

ಗಜೇಂದ್ರಗಡ ತಂಡಕ್ಕೆ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯ

ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಗದಗ ಅಡಿಯಲ್ಲಿ ನಡೆದ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಲೆದರ್ ಬಾಲ್ ರಿಪಬ್ಲಿಕ್‌ ಕಪ್ 2026 ಕ್ರಿಕೆಟ್ ಪಂದ್ಯಾವಳಿಯಲ್ಲಿ ಗಜೇಂದ್ರಗಡ ತಂಡ ೧೧ ರನ್‌ಗಳಿಂದ ಜಯಗಳಿಸಿದೆ.

ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗಜೇಂದ್ರಗಡ ತಂಡದವರು ಲಕ್ಷ್ಮೇಶ್ವರ ತಂಡಕ್ಕೆ ೧೧ ರನ್‌ಗಳ ಮುನ್ನತೆ ನೀಡಿ ಜಯಗಳಿಸಿದರು.

ಅತ್ಯುತ್ತಮ ಬ್ಯಾಟಿಂಗ್ ಆಟಗಾರ ಶ್ರೀ ಎಂ ಎಸ್ ಹಿರೇಮಠ್, ಅತ್ಯುತ್ತಮ ಬೌಲಿಂಗ್ ಸಾಧನೆಗಾಗಿ ಶ್ರೀ ಸತೀಶ್ ಪೂಜಾರ ಮತ್ತು ಅತ್ಯುತ್ತಮ ಆಟಗಾರ ಶ್ರೀ ಎಂ ಎಸ್ ಹಿರೇಮಠ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.