

ಡೈಲಿ ವಾರ್ತೆ:JAN/18/2026

ಹೈಕಾಡಿ| ವಿದ್ಯಾರ್ಥಿಗಳಿಗೆ ಪರೀಕ್ಷಾ ಆತಂಕ ನಿವಾರಣೆಗೆ ಕಾರ್ಯಾಗಾರ: ಆಧುನಿಕ ಜೀವನ ಶೈಲಿಯ ನಡುವೆ ಹದಿಹರೆಯರ ಚಂಚಲ ಮನಸ್ಸಿಗೆ, ಗೊಂದಲದ ಸಮಸ್ಯೆಗಳಿಗೆ ಇಂತಹ ಕಾರ್ಯಗಾರಗಳು ಪ್ರಸ್ತುತ: ಮೊಳಹಳ್ಳಿ ದಿನೇಶ್ ಹೆಗ್ಡೆ

–ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ.
ಹೈಕಾಡಿ: ಮೊಳಹಳ್ಳಿ ದಿನೇಶ ಹೆಗ್ಡೆ ಜಯರತ್ನ ಟ್ರಸ್ಟ್ (ರಿ.) ಸಂಸ್ಥೆಯ ವತಿಯಿಂದ ಸರಕಾರಿ ಪ್ರೌಢಶಾಲೆ ಹೈಕಾಡಿ ಇಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪರೀಕ್ಷಾ ಆತಂಕ ಹಾಗೂ ಒತ್ತಡ ಮುಕ್ತವಾಗಿ ಪರೀಕ್ಷೆಗೆ ತಯಾರಾಗುವುದು ಪರೀಕ್ಷಾ ಸಮಯದಲ್ಲಿ ಪೋಷಕರ ಪಾತ್ರಗಳಾಗುವುವು ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೊಳಹಳ್ಳಿ ದಿನೇಶ್ ಹೆಗ್ಡೆ ರವರು ಮಾತನಾಡಿ, ಆಧುನಿಕ ಜೀವನಶೈಲಿ ಹಾಗೂ ಹದಿಹರೆಯದ ಘಟ್ಟದಿಂದ ವಿದ್ಯಾರ್ಥಿಗಳು ಈಗಾಗಲೇ ಸಹಜ ಒತ್ತಡವನ್ನು ಅನುಭವಿಸುತ್ತಿದ್ದು, ಪರೀಕ್ಷಾ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ಪರೀಕ್ಷೆಯನ್ನು ಸರಿಯಾಗಿ ಎದುರಿಸಲಾಗದೆ, ತಮ್ಮದೇ ನಕರಾತ್ಮಕ ಯೋಚನೆಗಳಿಂದ ಪರೀಕ್ಷಾ ಆತಂಕವನ್ನು ಹೊಂದುತ್ತಿದ್ದಾರೆಂದು ತಿಳಿಸಿದರು. ಸಂಸ್ಥೆಯು ವಿದ್ಯಾರ್ಥಿಗಳಿಗೆ ಉಚಿತ ಆನ್ ಕಾಲ್ ಆಪ್ತ ಸಮಾಲೋಚನೆಯನ್ನು ನುರಿತ ಆಪ್ತ ಸಮಾಲೋಚಕರಿಂದ ಜನವರಿ ಒಂದರಿಂದಲೇ ಪ್ರಾರಂಭಿಸಿದ್ದು, ಈ ಸೇವೆಯು ಪರೀಕ್ಷೆ ಮುಗಿಯುವ ತನಕ ಲಭ್ಯವಿರುತ್ತದೆ ಎಂದರು.
ಪರೀಕ್ಷಾ ಆತಂಕ ಮತ್ತು ಒತ್ತಡ ಮುಕ್ತವಾಗಿ ಪರೀಕ್ಷೆಗೆ ತಯಾರಾಗುವುದು ಹೇಗೆ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ನೀಡಿದ ಕೆಲವು ಮುಖ್ಯ ಅಂಶಗಳು:
- ಪರೀಕ್ಷಾ ಆತಂಕ ಎಂದರೇನು?
ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಅನುಭವಿಸುವ ಭಯ, ಒತ್ತಡ ಮತ್ತು ಆತಂಕವನ್ನು ಪರೀಕ್ಷಾ ಆತಂಕ ಎಂದು ಕರೆಯಲಾಗುತ್ತದೆ. - ಪರೀಕ್ಷಾ ಆತಂಕದ ಲಿನ್ಯಗಳು:
- ಪರೀಕ್ಷೆಯಲ್ಲಿ ಉತ್ತೀರಲಾಗುವುದಿಲ್ಲ ಎಂಬ ಭಯ
- ಉತ್ತರಗಳನ್ನು ಮರೆತುಬಿಡುವ ಭಯ
- ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆಗಳನ್ನು ಪೂರೈಸಲಾಗುವುದಿಲ್ಲ ಎಂಬ ಒತ್ತಡ
- ಪರೀಕ್ಷಾ ಆತಂಕವನ್ನು ನಿಭಾಯಿಸುವ ಮಾರ್ಗಗಳು:
- ಸಕಾರಾತ್ಮಕ ಮನೋಭಾವನೆ ಹೊಂದಿರಿ
- ಸರಿಯಾದ ಸಮಯಕ್ಕೆ ತಯಾರಿ ನಡೆಸಿ
- ಪರೀಕ್ಷೆಯ ದಿನದಂದು ಸಾಕಷ್ಟು ವಿಶ್ರಾಂತಿ ಪಡೆಯಿರಿ
- ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ
- ಪೋಷಕರ ಪಾತ್ರ:
- ಮಕ್ಕಳಿಗೆ ಸಕಾರಾತ್ಮಕ ಬೆಂಬಲ ನೀಡಿ
- ಅವರ ತಯಾರಿಯನ್ನು ಪರಿಶೀಲಿಸಿ
- ಅವರೊಂದಿಗೆ ಸಂವಹನ ನಡೆಸಿ
ಮನಶ್ಶಾಸ್ತ್ರಜ್ಞರ ಪಾತ್ರ:
ಪರೀಕ್ಷಾ ಆತಂಕವನ್ನು ಗುರುತಿಸಿ ಮೌಲ್ಯಮಾಪನ ಮಾಡುವುದು
ಆತಂಕ ನಿರ್ವಹಣಾ ತಂತ್ರಗಳನ್ನು ಕಲಿಸುವುದು
ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ ಬೆಳೆಸಲು ಸಹಾಯ ಮಾಡುವುದು
ಅಧ್ಯಯನ ಕೌಶಲ್ಯಗಳು ಮತ್ತು ಸಮಯ ನಿರ್ವಹಣೆ ತರಬೇತಿ ನೀಡುವುದು.
ಮನೋವೈದ್ಯರಪಾತ್ರ: ಚಿಕಿತ್ಸೆ ಅಗತ್ಯವಿದ್ದಲ್ಲಿ ಆತಂಕ ನಿವಾರಕ ಮಾತ್ರೆಗಳನ್ನು ನೀಡಿ. ವಿದ್ಯಾರ್ಥಿಯ ಉತ್ತಮ ಭಾಗವಹಿಸುವಿಕೆಗೆ ಅನುಕೂಲ ಮಾಡಿಕೊಡುವುದು.
ಈ ಕಾರ್ಯಕ್ರಮದಲ್ಲಿ ಗಣೇಶ್ ಕಿಣಿ ಮುಖ್ಯ ಶಿಕ್ಷಕರು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯE. C. O ಪ್ರಮೀಳಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಆರತಿ,
ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂಹಿತ ಹೆಬ್ಬಾರ್, ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಘವೇಂದ್ರ ಮಡಿವಾಳ ಉಪಸ್ಥಿತರಿದ್ದರು. ಗಣೇಶ್ ಸಹ ಶಿಕ್ಷಕರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಪ್ರವೀಣ್ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.