
ಡೈಲಿ ವಾರ್ತೆ:JAN/20/2026
ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಪ್ರೇರಣಾ ಶಿಬಿರ ಉದ್ಘಾಟನೆ: ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಅತ್ಯಮೂಲ್ಯ ಹಂತ – ಆನಂದ್ ಸಿ.ಕುಂದರ್

ಕೋಟ: ಮಣೂರು ಪಡುಕರೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮೂರು ದಿನಗಳ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆ ಪ್ರೇರಣಾ ಶಿಬಿರವನ್ನು ಗೀತಾನಂದ ಫೌಂಡೇಶನ್, ಮನಸ್ಮಿತಾ ಫೌಂಡೇಶನ್ ಹಾಗೂ ಮೊಗವೀರ ಯುವ ಸಂಘಟನೆ ಕೋಟ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮಣೂರು ಪಡುಕರೆ ನಲ್ಲಿ ಉದ್ಘಾಟಿಸಲಾಯಿತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಉಪನ್ಯಾಸಕ ಆನಂದ ಸಿ. ಕುಂದರ್ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ, “ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಅತ್ಯಮೂಲ್ಯ ಹಂತ. ಕಲಿತ ವಿಷಯವನ್ನು ಮನನ ಮಾಡಿ, ಪರೀಕ್ಷೆ ಬರೆಯುವ ಕ್ರಮದಲ್ಲಿ ಶ್ರಮವಹಿಸಿ ಗುಣಮಟ್ಟದ ಹೆಚ್ಚಿನ ಫಲಿತಾಂಶ ಸಾಧಿಸಿದರೆ ಗೀತಾನಂದ ಫೌಂಡೇಶನ್ ವೇತನ ಮತ್ತು ಸನ್ಮಾನ ನೀಡುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡೆನ್ನಿಸ್ ಚಾಂಜಿ ಕೆ, ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಶುಭಾಶಯ ಸಲ್ಲಿಸಿ, ಪದವಿ ಪೂರ್ವ ಶಿಕ್ಷಣ ಕಡಿಮೆ ಶುಲ್ಕದಲ್ಲಿ ಕಲಿಯಲು ತಮ್ಮ ಸಂಸ್ಥೆಯಲ್ಲಿ ಅವಕಾಶವಿರುವುದನ್ನು ತಿಳಿಸಿದ್ದಾರೆ.
ಶಿಬಿರದ ಆಯೋಜನೆಯಲ್ಲಿ ಸಹಕರಿಸಿದ ರಂಜಿತ್ ಕುಮಾರ್ (ಅಧ್ಯಕ್ಷ, ಮೊಗವೀರ ಯುವ ಸಂಘಟನೆ ಕೋಟ) ಮತ್ತು ರಮೇಶ್ ಕುಂದರ್ (ಅಧ್ಯಕ್ಷ, ವಾಹಿನಿ ಯುವಕ ಮಂಡಲ) ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಮಂಜುನಾಥ ಹೊಳ್ಳ, ಹಿರಿಯ ಸಹಶಿಕ್ಷಕರು ರಾಮ್‌ದಾಸ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದ್ದಾರೆ. ಶಿಬಿರದ ಸಂಯೋಜಕ ರವಿಕಿರಣ ಗೀತಾನಂದ ಫೌಂಡೇಶನ್‌ನ್ನು ವಂದಿಸಿದರು.
ವಿದ್ಯಾರ್ಥಿಗಳು ಮೈತ್ರಿ ಮತ್ತು ಪೂರ್ವಿ ತಮ್ಮ ಅನುಭವ ಹಂಚಿಕೊಂಡರು.
ತದನಂತರ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ತರಬೇತಿ ಅಧಿವೇಶವನ್ನು ಉದಯ ಗಾಂವಕಾರ ನಡಿಸಿದ್ದಾರೆ. ಗಣಿತ ವಿಷಯವನ್ನು ಸುಲಭವಾಗಿ ಕಲಿಯುವ ವಿಧಾನಗಳ ಕುರಿತು ಗಣೇಶ್ ಶೆಟ್ಟಿಗಾರ್ ವರ್ಗವನ್ನು ನಡೆಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಿಬಿರದಿಂದ ಮಹತ್ವಪೂರ್ಣ ಪ್ರಯೋಜನ ಪಡೆದರು.