ಡೈಲಿ ವಾರ್ತೆ:JAN/20/2026

ಐಕ್ಯ ವೇದಿಕೆ ನೂತನ ಕಚೇರಿಗೆ ಭೇಟಿ: ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕ ಪ್ರಕಾಶ್ ದೇವಾಡಿಗರಿಗೆ ಸನ್ಮಾನ

ವಿಟ್ಲ : ಐಕ್ಯ ವೇದಿಕೆ (ರಿ), ಕೊಡಾಜೆ ಇದರ ನೂತನ ಕಚೇರಿಗೆ ಭೇಟಿ ನೀಡಿದ ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರನ್ನು ಐಕ್ಯ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಐಕ್ಯ ವೇದಿಕೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ನೆಟ್ಲಮುಡ್ನೂರು, ಮಾಣಿ ಹಾಗೂ ಅನಂತಾಡಿ ಗ್ರಾಮಗಳಿಗೆ ಸೀಮಿತವಾಗಿರುವ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಐಕ್ಯ ವೇದಿಕೆಯ ಅಧ್ಯಕ್ಷ ಅಶ್ರಫ್ ಭಾರತ್, ಕೋಶಾಧಿಕಾರಿ ರಫೀಕ್ ಎಸ್.ಎಸ್., ಕಾರ್ಯದರ್ಶಿ ಆಬಿದ್ ನೇರಳಕಟ್ಟೆ, ಸದಸ್ಯರಾದ ಅಬೂಬಕ್ಕರ್ (ಅಬ್ಬು) ಹಾಗೂ ಮಜೀದ್ ಅನಂತಾಡಿ ಉಪಸ್ಥಿತರಿದ್ದರು.

ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.