ಡೈಲಿ ವಾರ್ತೆ:JAN/25/2026

ಹಿಂದೂಗಳು ಸಂಘಟಿತರಾಗದಿದ್ದರೆ ಭವಿಷ್ಯದಲ್ಲಿ ಆಪತ್ತು ಅನಿವಾರ್ಯ: ಕೋಟದಲ್ಲಿ ಕವಿತಾ ಆಚಾರ್ಯ ಮುದೂರು ಎಚ್ಚರಿಕೆ

ಕೋಟ, ಜ.25 : ಹಿಂದೂ ಸಮಾಜವು ಮೈಮರೆತು ಸಂಘಟಿತರಾಗದೆ ಇದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಆಪತ್ತು ಎದುರಾಗುವುದು ಕಟ್ಟಿತ್ತ ಬುತ್ತಿ. ಆದ್ದರಿಂದ ಯುವ ಪೀಳಿಗೆಗೆ ಸಂಸ್ಕೃತಿ ಹಾಗೂ ಸಂಸ್ಕಾರದ ಕುರಿತು ಅರಿವು ಮೂಡಿಸುವುದು ಅತ್ಯಗತ್ಯ ಎಂದು ಕವಿತಾ ಆಚಾರ್ಯ ಮುದೂರು ಹೇಳಿದರು.

ಅವರು ಜ.25ರಂದು ಕೋಟದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಹಿಂದೂ ಸಂಸ್ಕೃತಿಗೆ ಸಾವಿರಾರು ವರ್ಷದ ಇತಿಹಾಸವಿದ್ದು, ತನ್ನದೇ ಆದ ವಿಶಿಷ್ಟತೆ ಇದೆ. ನಾವು ನಮ್ಮ ಧಾರ್ಮಿಕ ನೆಲಗಟ್ಟನ್ನು ಮರೆತರೆ ನಮ್ಮ ಮೇಲೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ದಾಳಿಗಳು ಖಂಡಿತವಾಗಿಯೂ ನಡೆಯಲಿವೆ ಎಂದು ಎಚ್ಚರಿಸಿದರು.

ಹಿಂದೂ ಸಂಘಟನೆಯ ಪ್ರಮುಖರಾದ ಉದ್ಯಮಿ ಬೆಳ್ವೆ ಗಣೇಶ್ ಕಿಣಿ ಭೌದ್ಧಿಕ ವಿಚಾರದ ಕುರಿತು ಮಾತನಾಡಿ, ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ಸಂಘಟನೆ ಬಲಪಡಿಸುವ ಉದ್ದೇಶದಿಂದ ಈ ರೀತಿಯ ಸಮಾವೇಶಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೋಟ ಹಿರೇಮಹಾಲಿಂಗಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂತಪದ್ಮನಾಭ ಐತಾಳ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಕುಂದರ್, ಉದ್ಯಮಿ ಪ್ರಶಾಂತ್ ಕುಂದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾವೇಶಕ್ಕೆ ಮೊದಲು ಪಾದಯಾತ್ರೆ ನೆರವೇರಿಸಲಾಯಿತು. ಸಂಘಟನೆಯ ಪ್ರಸಾದ್ ಬಿಲ್ಲವ ಸ್ವಾಗತಿಸಿ, ರಂಜಿತ್ ಬಾರಿಕೆರೆ ಕಾರ್ಯಕ್ರಮ ನಿರೂಪಿಸಿದರು.