ಡೈಲಿ ವಾರ್ತೆ:JAN/27/2026

ಲಕ್ಷ್ಮೇಶ್ವರದಲ್ಲಿ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ಎನ್‌ಎಂಎಂಎಸ್ ಉಚಿತ ತರಬೇತಿ ಸಮಾರೋಪ, ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಗೌರವ

ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಲಕ್ಷ್ಮೇಶ್ವರದ ವತಿಯಿಂದ 2024–25ನೇ ಸಾಲಿನ ವಾರ್ಷಿಕ ಮಹಾಸಭೆ, ಎನ್‌ಎಂಎಂಎಸ್ ಉಚಿತ ತರಬೇತಿ ಸಮಾರೋಪ ಸಮಾರಂಭ ಹಾಗೂ 2025–26ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಗೌರವ ಸಮಾರಂಭವನ್ನು ಜ. 24 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಲಕ್ಷ್ಮೇಶ್ವರ ತಾಲೂಕು ಶಾಖೆಯ ವತಿಯಿಂದ ಬ್ಯಾಗ್ (BAG) ಹಾಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾದ ಗುರುರಾಜ ಹವಳದ ಅವರು ಸಂಘಟನೆಯ ಬಲವರ್ಧನೆಗೆ ನೌಕರರ ಏಕತೆ ಅಗತ್ಯವಿದೆ ಎಂದು ತಿಳಿಸಿದರು.

ಗದಗ ಜಿಲ್ಲಾ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ ಅವರು ಲಕ್ಷ್ಮೇಶ್ವರ ತಾಲೂಕು ಶಾಖೆಯು ಗದಗ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗದಗ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷರಾದ ರವಿ ಎಲ್. ಗುಂಜೀಕರ ಅವರು ನೌಕರರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಡೆಸಬೇಕೆಂದು ಶುಭ ಹಾರೈಸಿದರು.

ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ನಾಣಕಿ ನಾಯಕ ಅವರು ಎನ್‌ಎಂಎಂಎಸ್ ಉಚಿತ ತರಬೇತಿಯು ಮಕ್ಕಳ ಕಲಿಕೆಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿಗಳಾದ ಎಂ.ಎಂ. ನಿಟ್ಟಾಲಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಧರ್, ಜಿಲ್ಲಾ ಕಾರ್ಯದರ್ಶಿಗಳಾದ ಮಲಕಶೆಟ್ಟಿ, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ಐ.ಎ. ಗಾಡಗೋಳಿ, ತಾಲೂಕು ಕಾರ್ಯದರ್ಶಿ ಎಂ.ಎ. ನದಾಫ, ರಾಜ್ಯ ಪರಿಷತ್ ಸದಸ್ಯರಾದ ಎ.ಬಿ. ಗೌಡರ, ಖಜಾಂಚಿ ಎಂ.ಡಿ. ವಾರದ, ಜಿಲ್ಲಾ ನಾಮ ನಿರ್ದೇಶಿತ ಸದಸ್ಯರಾದ ಎಂ.ಎಸ್. ಹಿರೇಮಠ, ಶ್ರೀಮತಿ ಎಲ್.ಎನ್. ನಂದೆಣ್ಣವರ್, ತಾಲೂಕು ನಿರ್ದೇಶಕರಾದ ಮಂಜುನಾಥ ಕೊಕ್ಕರಗುಂದಿ, ಬಿ.ಎಂ. ಯರಗುಪ್ಪಿ, ಪಕೀರಪ್ಪ ಹೂಗಾರ್, ಮಹಮ್ಮದ್ ಹನೀಫ್ ಶಿರಹಟ್ಟಿ, ಎ.ಎಂ. ಅಕ್ಕಿ, ಪ್ರಶಾಂತ್ ಸನದಿ ಸೇರಿದಂತೆ ವಿವಿಧ ವೃಂದಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸಮಸ್ತ ಸರ್ಕಾರಿ ನೌಕರರು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ನವೀನ್ ಅಂಗಡಿ ಅವರು ಸುಸೂತ್ರವಾಗಿ ನೆರವೇರಿಸಿದರು. ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಿತು.