
ಡೈಲಿ ವಾರ್ತೆ:ಜನವರಿ/28/2026
ಪಂಚವರ್ಣದಿಂದ 51ನೇ ರೈತರೆಡೆಗೆ ಕಾರ್ಯಕ್ರಮ:
ರೈತ ಕಾಯಕ ಉಳಿಸುವಲ್ಲಿ ಹಿರಿಯ ತಲೆಮಾರಿನ ಕೊಡುಗೆ- ಸಹಕಾರಿ ಧುರೀಣ ಜಿ.ತಿಮ್ಮ ಪೂಜಾರಿ

ಕೋಟ: ಕೃಷಿ ಉಳಿಯ ಬೇಕಾದರೆ ಪರಿಸರ ಉಳಿಸಿ ಬೆಳೆಸಬೇಕು ಎಂದು ಸಹಕಾರಿ ಧುರೀಣ ಜಿ.ತಿಮ್ಮ ಪೂಜಾರಿ ಹೇಳಿದರು.
ಮಂಗಳವಾರ ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 51ರ ಸರಣಿಯ ಕಾರ್ಯಕ್ರಮದಲ್ಲಿ ಮಾತನಾಡಿ ಕೃಷಿ ಭೂಮಿಗೆ ಕಂಠಕವಾಗಿ ಪರಿಣಮಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಕೃತಕ ನೆರೆ ಸೃಷ್ಠಿಯಾಗುತ್ತಿದೆ ಇದರಿಂದ ಕೃಷಿ ಮಾಡಲಾಗದೆ ಹಡಿಲು ಬಿಡುವ ಸ್ಥಿತಿ ನಿರ್ಮಾಣಗೊಂಡಿದೆ.
ಈ ಹಿನ್ನಲ್ಲೆಯಲ್ಲಿ ಪರಿಸರವನ್ನು ಶುಚಿಯಾಗಿರಿಸಿಕೊಂಡರೆ ಕೃಷಿ ಸಂಕುಲ ಉಳಿಯಲು ಸಾಧ್ಯ ಎಂದ ಅವರು ಪಂಚವರ್ಣ ರೈತರೆಡೆಗೆ ಕಾರ್ಯ ಮನೆ ಮನಗಳನ್ನು ತಲುಪುತ್ತಿದೆ ಇವರ ಪ್ಲಾಸ್ಟಿಕ್ ಮುಕ್ತ ಪರಿಸರ ಕಾಳಜಿ ಹೊಸ ದಾಖಲೆಯನ್ನು ಸೃಷ್ಠಿಸುತ್ತಿದೆ. ರೈತ ಹಿರಿಯ ಜೀವಿ ಲಕ್ಷ್ಮೀ ಮರಕಾಲ್ತಿ ಗೌರವಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಆಂದೋಲನದ ಭಾಗವಾಗಿ ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್ ಕೊಡಮಾಡಿದ ಬಟ್ಟೆ ಚೀಲಗಳನ್ನು ವಿತರಿಸಿ ಪರಿಸರ ಜಾಗೃತಿಗೈಯಲಾಯಿತು.
51ನೇ ರೈತ ಪುರಸ್ಕಾರವನ್ನು ಕಾರ್ತಟ್ಟು ಹುಣ್ಸೆಬೆಟ್ಟು ಲಕ್ಷ್ಮೀ ಮರಕಾಲ್ತಿ ಇವರಿಗೆ ಕೃಷಿ ಪರಿಕರವನ್ನು ನೀಡಿ ಪ್ರದಾನಿಸಲಾಯಿತು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಭೋಜ ಪೂಜಾರಿ ಅಭಿನಂದನಾ ನುಡಿಗಳನ್ನಾಡಿದರು.
ಮುಖ್ಯ ಅಭ್ಯಾಗತರಾಗಿ ಪಾರಂಪಳ್ಳಿ ಪರಿಸರದ ಹಿರಿಯ ಕೃಷಿಕ ರಘು ಮಧ್ಯಸ್ಥ, ರೈತಧ್ವನಿ ಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಸ್ನೇಹಕೂಟದ ಭಾರತಿ ವಿ ಮಯ್ಯ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಪಂಚವರ್ಣದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ಸದಸ್ಯ ಮಹೇಶ್ ಬೆಳಗಾವಿ ವಂದಿಸಿದರು. ಕಾರ್ಯಕ್ರಮವನ್ನು ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು.