ಡೈಲಿ ವಾರ್ತೆ: ಫೆ./22/2026

ನಾಗಮಂಡಲೋತ್ಸವದಲ್ಲಿ ಪಾಲ್ಗೊಳ್ಳಿ ಯಶಸ್ವಿಗೊಳಿಸಿ: ಆನಂದ್ ಸಿ ಕುಂದರ್

ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ದೇಗುಲದ ವತಿಯಿಂದ ಇದೇ ಬರುವ ಮಾರ್ಚ್ ೧ರಂದು ಕೋಟದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಏಕ: ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಜರಗಿತು.

ಕಾರ್ಯಕ್ರಮಕ್ಕೆ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಚಾಲನೆ ನೀಡಿ ಪವಿತ್ರವಾದ ನಾಗಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಕ್ತಿಪೂರ್ವಕವಾಗಿ ಭಾಗವಹಿಸಿ ಯಶಸ್ವಿಗೊಳಿಸಿ ಅಲ್ಲದೆ ಇಂದಿನ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ ಪಂಚವರ್ಣ ಸಂಘಟನೆ,ಜನತಾ ಸಮೂಹ ಸಂಸ್ಥೆ,ಗೀತಾನಂದ ಟ್ರಸ್ಟ್, ಹಂದಟ್ಟು ಮಹಿಳಾ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ,ಗೀತಾನಂದ ಟ್ರಸ್ಟ್ ಮಣೂರು,ಜನತಾ ಸಮೂಹ ಸಂಸ್ಥೆಗಳು ಕೋಟ,ಹಂದಟ್ಟು ಮಹಿಳಾ ಬಳಗ ಕೋಟ ಇವರ ನೇತೃತ್ವದಲ್ಲಿ 292ನೇ ಭಾನುವಾರದ ಅಂಗವಾಗಿ ಈ ನಾಗಮಂಡಲೋತ್ಸವದ ಪೂರ್ವತಯಾರಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತು.

ಈ ಸಂದರ್ಭದಲ್ಲಿ ದೇಗುಲದ ಟ್ರಸ್ಟಿಗಳಾದ ಚಂದ್ರ ಆಚಾರ್,ಶಿವ ಪೂಜಾರಿ,ಪ್ರಗತಿಪರ ಕೃಷಿಕ ರವೀಂದ್ರ ಐತಾಳ್,ಸ್ಥಳೀಯರಾದ ದೇವದಾಸ್ ಕಾಂಚನ್,ಜನತಾ ಫಿಶ್ ಮಿಲ್ ವ್ಯವಸ್ಥಾಪಕರಾದ ಶ್ರೀನಿವಾಸ ಕುಂದರ್ ,ಮಿಥುನ್ ಕುಮಾರ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ,ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣ ಗ, ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಯಶೋಧ ಹಂದಟ್ಟು, ಸ್ಥಾಪಕಾಧ್ಯಕ್ಷೆ ಪುಷ್ಭ ಹಂದಟ್ಟು ,ಗೀತಾನಂದ ಟ್ರಸ್ಟ್ ಸಮಾಜಕಾರ್ಯ ವಿಭಾಗದ ರವಿ ಕಿರಣ್ ಕೋಟ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿದರು.ರವೀಂದ್ರ ಕೋಟ ಸಂಯೋಜಿಸಿದರು.