ಡೈಲಿ ವಾರ್ತೆ: ಮಾ./01/2026

ಹೊಸಂಗಡಿಯಲ್ಲಿ ಭೀಕರ ದುರಂತ: ಟ್ರೆಕ್ಕಿಂಗ್ ವೇಳೆ ನದಿಯಲ್ಲಿ ಮುಳುಗಿ ಕುಂದಾಪುರದ ಮಹಿಳೆ ದಾರುಣ ಸಾವು

ಕುಂದಾಪುರ,ಮಾ.01: ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಹೊಸಂಗಡಿಯ ಭಾಗಿಮನೆ ಸಮೀಪ ಶನಿವಾರ ಸಂಭವಿಸಿದೆ.

ಕುಂದಾಪುರದ ಮೆಡಿಕಲ್ ಶಾಪ್ ಮಾಲಕಿ ಶುಭಶ್ರೀ ಕಾರಂತ್ (53) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕುಂದಾಪುರದಿಂದ ಸುಮಾರು 8 ರಿಂದ 10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಪ್ರದೇಶಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಈ ವೇಳೆ ಶುಭಶ್ರೀ ಅವರು ನದಿಯಲ್ಲಿ ಕಾಲು ಜಾರಿ ಮುಳುಗಿದರೆಂದು ತಿಳಿದುಬಂದಿದೆ.

ಸಹಯಾತ್ರಿಕರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗದೆ, ಬಳಿಕ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು.

ಅಮಾಸೆಬೈಲು ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.