ಡೈಲಿ ವಾರ್ತೆ: ಮಾ./09/2026

ಕೋಟದ ಪಂಚವರ್ಣ ಮಹಿಳಾ ಮಂಡಲದಿಂದ ಸಾಸ್ತಾನ ಲೀಲಾವತಿ ಗಂಗಾಧರ ಇವರಿಗೆ ವಿಶ್ವಮಹಿಳಾ ದಿನಾಚರಣೆ ಪುರಸ್ಕಾರ: ಮಹಿಳೆಯಿಂದ ದೇಶ ಸುಭದ್ರ- ಶ್ರೀಲತಾ ಸುರೇಶ್ ಶೆಟ್ಟಿ

ಕೋಟ: ದೇಶ ಮಹಿಳೆಯರಿಂದ ಸುಭದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಇದಕ್ಕೆ ಇತ್ತೀಚಿಗಿನ ಕೆಲ ಹುದ್ದೆಗಳನ್ನು ಅಲಂಕೃರಿಸಿದ ಮಹಿಳಾ ಮಣಿಗಳ ಕಾರ್ಯವೈಕರಿಯೇ ಸಾಕ್ಷಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

ಸೋಮವಾರ ಕೋಟದ ಸಮುದ್ಯತಾ ಬ್ಯಾಂಕೇಟ್ ಹಾಲ್‌ನಲ್ಲಿ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲ ಇವರ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದು ಮಾತನಾಡಿ ದೇಶದ ಒಟ್ಟು ವ್ಯವಸ್ಥೆಯಲ್ಲಿ ಮಹಿಳೆ ಮುಂಚೂಣಿಯಲ್ಲಿದ್ದಾಳೆ ಅದರೆ ದೇಶದ ಮೊದಲ ಮುಖ್ಯ ನ್ಯಾಯಧೀಶ ಮಹಿಳೆಯಾಗಬೇಕು ಅದೊಂದು ಶ್ರೀಘ್ರದಲ್ಲಿ ನೆರವೆರಲಿ ಎಂದರಲ್ಲದೆ ಸಾಧಕರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು ಅದರಲ್ಲೂ ಪಂಚವರ್ಣ ಎಂಬ ಸಂಸ್ಥೆಯ ಗೌರವ ದೊರಕಿರುವುದು ಯಾವುದೇ ಸಾಧಕರು ಹೆಮ್ಮೆ ಪಡುವ ಗೌರವವಾಗಿದೆ ಎಂದರು.

ಅಭಿನಂದನಾ ನುಡಿಗಳನ್ನಾಡಿದ ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ ಮಹಿಳೆ ಇಂದು ಬಹು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾಳೆ, ಸಮಾಜಿಕ ಕಾರ್ಯದಲ್ಲಿ ಪುರುಷರಂತೆ ಮಹಿಳೆ ಕೂಡಾ ಮುಂಚೂಣಿಯ ಹೆಜ್ಜೆ ಇರಿಸಿದ್ದಾಳೆ ಇಂತಹ ಸಂದರ್ಭದಲ್ಲಿ ಲೀಲಾವತಿ ಎಂಬ ಮಹಿಳಾ ಸಾಧಕಿಯನ್ನು ಗುರುತಿಸುವ ಪಂಚವರ್ಣ ಮಹಿಳಾ ಮಂಡಲಕ್ಕೆ ಪ್ರತಿಮಹಿಳೆ ಬೆಂಬಲ ಇದ್ದೆ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಪಂಚವರ್ಣ ಸಾಧಕ ಮಹಿಳಾ ಪುರಸ್ಕಾರವನ್ನು ಪಾಂಡೇಶ್ವರ ಲೀಲಾವತಿ ಗಂಗಾಧರ ಪೂಜಾರಿ ಇವರಿಗೆ ಪ್ರದಾನಿಸಲಾಯಿತು.

ಸಭಾಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.
ಕಾರ್ಯಕ್ರಮವನ್ನು ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ ಮಯ್ಯ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅಭ್ಯಾಗತರಾಗಿ ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಸದಸ್ಯೆ ಜಯಂತಿ ಕೋಟ್ಯಾನ್ ಪ್ರಾರ್ಥಿಸಿ,ಸ್ನೇಹಕೂಟದ ವಿನಯ ಉಡುಪ ಸನ್ಮಾನ ಪತ್ರ ವಾಚಿಸಿ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ,ಪ್ರದಾನಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ದಿನೇಶ್ ಆಚಾರ್, ಪುಷ್ಭ ಹಂದಟ್ಟು ಸಹಕರಿಸಿದರು.ಸಮುದ್ಯತಾ ಗ್ರೂಪ್ಸ್ ಸಮೂಹ ಸಂಸ್ಥೆ ಸಹಕಾರ ನೀಡಿತು.