

ಡೈಲಿ ವಾರ್ತೆ: ಮಾ./09/2026

ಹುಸೇನ್ ಹೈಕಾಡಿಯವರಿಗೆ ‘ಔಟ್ ಸ್ಟಾಂಡಿಂಗ್ ನ್ಯಾಷನಲ್ ಡೈರೆಕ್ಟರ್’ ಪ್ರಶಸ್ತಿ ಪ್ರದಾನ

ಬೆಂಗಳೂರು: ಇಲ್ಲಿನ ಬಂಟರ ಸಭಾ ಭವನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (SCI) ಬೆಂಗಳೂರು ಲೀಜನ್ ಆತಿಥ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ, ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ ಹುಸೇನ್ ಹೈಕಾಡಿ ಅವರಿಗೆ ‘ಔಟ್ ಸ್ಟಾಂಡಿಂಗ್ ನ್ಯಾಷನಲ್ ಡೈರೆಕ್ಟರ್ ವಿನ್ನರ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ SNR, PPS, MR ಜಯೇಶಾ ಅವರು ಹುಸೇನ್ ಹೈಕಾಡಿ ಅವರ ನಾಯಕತ್ವ ಮತ್ತು ಸಂಘಟನಾತ್ಮಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಸಮಾರಂಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ವಾಸುದೇವನ್ (ಕೇರಳ), ರಾಷ್ಟ್ರೀಯ ಖಜಾಂಚಿ ಸಂಪತ್ ಕುಮಾರ್ (ದುಬೈ), ಜಿ ಎಲ್ ಸಿ ಜಗದೀಶ್, ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಸಿದ್ದಗಂಗೈಯಾ, ಬೋಬಾನ್, ಸುರೇಖಾ ಮುರಳೀಧರ (ಶಿವಮೊಗ್ಗ) ಮತ್ತು ಗೀತಾಲತಾ (ಮೈಸೂರು) ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖ ನಿರ್ದೇಶಕರುಗಳಾದ ಶಿವಕುಮಾರ್, ಪ್ರದೀಪ್, ಪುಷ್ಪ ಶೆಟ್ಟಿ (ಶಿವಮೊಗ್ಗ) ಸೇರಿದಂತೆ ಸಂಸ್ಥೆಯ ಹಲವಾರು ಪ್ರಮುಖ ಪದಾಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್‌ನ ಈ ಸಮ್ಮೇಳನವು ದೇಶದ ವಿವಿಧ ಭಾಗಗಳ ನಾಯಕರನ್ನು ಒಗ್ಗೂಡಿಸಿ, ಸಂಸ್ಥೆಯ ಭವಿಷ್ಯದ ಕಾರ್ಯಚಟುವಟಿಕೆಗಳ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಿತು.