ಡೈಲಿ ವಾರ್ತೆ: ಮಾ./10/2026

ಉಡುಪಿ, ಆಟೋ LPG ದರ ಏರಿಕೆ ಖಂಡಿಸಿ SDTU ಪ್ರತಿಭಟನೆ

ಉಡುಪಿ, ಮಾ.10: ಆಟೋ ರಿಕ್ಷಾಗಳಲ್ಲಿ ಬಳಸುವ ಎಲ್ಪಿಜಿ ಇಂಧನದ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಹಾಗೂ ದರ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಧರಣಿ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ SDTU ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ ಇತ್ತೀಚಿನ ದಿನಗಳಲ್ಲಿ ಆಟೋ LPG ದರವನ್ನು ಹೆಚ್ಚಿಸಿರುವುದು ಆಟೋ ಚಾಲಕರ ಬದುಕಿಗೆ ದೊಡ್ಡ ಹೊಡೆತವಾಗಿದ್ದು, ಬಹುತೇಕ ಆಟೋ ಚಾಲಕರು ದಿನನಿತ್ಯದ ಆದಾಯದ ಮೇಲೆ ಅವಲಂಬಿತರಾಗಿದ್ದು, ಇಂಧನದ ದರ ಏರಿಕೆಯಿಂದ ಕುಟುಂಬ ನಿರ್ವಹಣೆ, ವಾಹನದ ಬಾಡಿಗೆ, ಬ್ಯಾಂಕ್ ಸಾಲ ಹಾಗೂ ವಾಹನ ನಿರ್ವಹಣೆ ಮುಂತಾದ ಖರ್ಚುಗಳನ್ನು ಭರಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಎಸ್ಡಿಟಿಯು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಮಲ್ಲಾರ್ ಪ್ರಾಸ್ತಾವಿಕ ಮಾತನಾಡಿ ಸರ್ಕಾರವು ತಕ್ಷಣವೇ ಆಟೋ LPG ದರ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಆಟೋ ಚಾಲಕರಿಗೆ ಇಂಧನದ ಮೇಲೆ ವಿಶೇಷ ಸಬ್ಸಿಡಿ ನೀಡಬೇಕು ಜೊತೆಗೆ ಸಾರಿಗೆ ಕ್ಷೇತ್ರದ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಸಮಿತಿಯನ್ನು ರಚಿಸಿ ಚಾಲಕರ ಬದುಕು ಉಳಿಸುವಂತೆ ಸರ್ಕಾರ ಯೋಜನೆಗಳನ್ನು ರೂಪಿಸಬೇಕು ಎಂದರು

ಪ್ರತಿಭಟನೆಯಲ್ಲಿ SDTU ಕಾರ್ಯಕರ್ತರು ಹಾಗೂ ಆಟೋ ಚಾಲಕರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ನಾಯಕ ಶಾಹಿದ್ ಈ ಸಂದರ್ಭದಲ್ಲಿ ಮಾತನಾಡಿದರು
ಎಸ್ಡಿಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ರಫೀಕ್ ಪೊಲಿಪು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನೀಫ್ ಕಂಡ್ಲೂರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು
ಇಸ್ಮಾಯಿಲ್ ಉಸ್ತಾದ್ ಸ್ವಾಗತಿಸಿ ನಿರೂಪಿಸಿದರು