ಡೈಲಿವಾರ್ತೆ:27/ಮಾರ್ಚ್/2026

ಕೋಟ| ಬಿಲ್ಲಾಡಿ ದೇವಸ್ಥಾನದ ಜಾತ್ರೆಯಲ್ಲಿ ಗಲಾಟೆ: ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲು

​ಕೋಟ: ಬ್ರಹ್ಮಾವರ ತಾಲ್ಲೂಕಿನ ಬಿಲ್ಲಾಡಿ ಗ್ರಾಮದ ಅರ್ಭಕದಾರಕೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ ಶಾಂತಿ ಭಂಗ ಉಂಟುಮಾಡಿದ ಎಂಟು ಮಂದಿಯ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ಘಟನೆಯ ವಿವರ:
ದಿನಾಂಕ 25/03/2026 ರಂದು ದೇವಸ್ಥಾನದ ಜಾತ್ರಾ ಬಂದೋಬಸ್ತು ಕರ್ತವ್ಯದಲ್ಲಿದ್ದ ಕೋಟ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ ಕುಮಾರ್ ಆರ್ ಅವರಿಗೆ ಬೆಳಿಗ್ಗೆ 11:45 ರ ಸುಮಾರಿಗೆ ದೇವಸ್ಥಾನದ ಎದುರು ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದಾಗ, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಸುಮಾರು 8 ರಿಂದ 10 ಜನರು ಗುಂಪು ಸೇರಿ ಪರಸ್ಪರ ಕೈಕೈ ಮಿಲಾಯಿಸಿ ಗಲಾಟೆ ಮಾಡುತ್ತಿರುವುದು ಕಂಡುಬಂದಿದೆ.

​ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಗಲಾಟೆ ಮಾಡುತ್ತಿದ್ದ ಗಣೇಶ ಶೆಟ್ಟಿ, ಭಾಸ್ಕರ ಹೆಗ್ಡೆ, ​ಚಂದ್ರ ಶೆಟ್ಟಿ,​ಅಶೋಕ ಶೆಟ್ಟಿ, ​ಶಂಕರ ಶೆಟ್ಟಿ, ​ಅಭಿಷೇಕ್, ​ಚಂದ್ರ ಮಾಸ್ಟರ್ ಹಾಗೂ ​ಸಂದೇಶ ಈ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

​​ಸಾರ್ವಜನಿಕ ನೆಮ್ಮದಿಗೆ ಭಂಗ ತಂದ ಈ ಎಂಟು ಆರೋಪಿಗಳ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2026 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 194(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.