

ಡೈಲಿವಾರ್ತೆ:03/ಏಪ್ರಿಲ್ /2026


ಎಕ್ಸಲೆಂಟ್ ಕುಂದಾಪುರ: “ಬೇಸಿಗೆ ಕ್ರೀಡಾಶಿಬಿರದ – 2026″ ಏಪ್ರಿಲ್ 4 ರಂದು ಉದ್ಘಾಟನಾ ಕಾರ್ಯಕ್ರಮ

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಇದರ ಆಶ್ರಯದಲ್ಲಿ ಪ್ರತಿಭಾನ್ವಿತ ಕ್ರೀಡಾಯುವ ಮನಸ್ಸುಗಳಿಗೆ ಕ್ರೀಡೆಯಲ್ಲಿ ಉತ್ತುಂಗ ಶಿಖರಕ್ಕೇರುವ ನಿಟ್ಟಿನಲ್ಲಿ ನಮ್ಮ ಎಕ್ಸಲೆಂಟ್ ಕ್ಯಾಂಪಸ್‌ನಲ್ಲಿ ದಿನಾಂಗ 04/04/2026 ರಂದು ಬೇಸಿಗೆ ಕ್ರೀಡಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ.
ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ವಾಲಿಬಾಲ್ ಪಟುವಾದ ನವೀನ್ ಕಾಂಚನ್ ಅವರು ಉದ್ಘಾಟನೆ ಮಾಡುವ ಮೂಲಕ ಅದ್ಧೂರಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದೇವೆ. ಈ ಬೇಸಿಗೆ ಶಿಬಿರವು ದಿನಾಂಕ ಏಪ್ರಿಲ್ 4 ರಿಂದ ಏಪ್ರಿಲ್ 18ರ ವರೆಗೆ ಬೆಳಿಗ್ಗೆ 8:30ರಿಂದ 11:00 ಘಂಟೆಯ ವರೆಗೆ ನಡೆಯುತ್ತಿದ್ದು, ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ಮತ್ತು ಬಾಲಕರ ವಿಭಾಗದ ಕಬಡ್ಡಿ ತರಬೇತಿಯನ್ನು ನುರಿತ ತರಬೇತುದಾರರ ಮೂಲಕ ನೀಡಲಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.
ಈ ಕ್ರೀಡಾಶಿಬಿರದಲ್ಲಿ ಆಯ್ಕೆಯಾದ ವಿದ್ಯಾರ್ಥಿಗೆ ಉಚಿತ ಶಿಕ್ಷಣವನ್ನು ಸಂಸ್ಥೆಯು ನೀಡುತ್ತದೆ. ಹಾಗಾಗಿ ಎಕ್ಸಲೆಂಟ್ ವಿದ್ಯಾಸಂಸ್ಥೆಯು ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಜೊತೆಗೆ ಕ್ರೀಡೆಗೂ ಸಹ ಅದ್ಭುತ ಅವಕಾಶ ನೀಡಿ ಕ್ರೀಡೆಯಲ್ಲೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಂತೆ ಮಾಡುವ ಕಾರ್ಯ ಕೈಗೊಂಡಿರುತ್ತದೆ. ಹಾಗಾಗೀ ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗೆ ಇದೊಂದು ಉತ್ತಮ ವೇದಿಕೆ ಆಗಲಿದೆ ಎಂದು ಎಕ್ಸಲೆಂಟ್ ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.